ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಚೆನ್ನೈ ಸೂಪರ್‌ ಕಿಂಗ್ಸ್ ಎದುರು 108 ಮೀಟರ್ ಸಿಕ್ಸರ್ ಸಿಡಿಸಿದ ಲಿಯಾಮ್

Last Updated 4 ಏಪ್ರಿಲ್ 2022, 13:26 IST
ಅಕ್ಷರ ಗಾತ್ರ

ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿಆಲ್ರೌಂಡರ್‌ಲಿಯಾಮ್ ಲಿವಿಂಗ್‌ಸ್ಟೋನ್ ತೋರಿದ ಅಮೋಘ ಪ್ರದರ್ಶನದ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ ಜಯದ ನಗೆ ಬೀರಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಪಂಜಾಬ್‌ ಕೇವಲ 14 ರನ್ ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಅನುಭವಿ ಶಿಖರ್‌ ಧವನ್‌ಗೆ (33) ಜೊತೆಯಾದ ಲಿಯಾಮ್, ಮೂರನೇ ವಿಕೆಟ್‌ ಜೊತೆಯಾಟದಲ್ಲಿ 95 ರನ್ ಕೂಡಿಸಿದರು.

32 ಎಸೆತ ಎದುರಿಸಿದ ಇಂಗ್ಲೆಂಡ್ ಆಟಗಾರಲಿಯಾಮ್ ತಲಾ ಐದು ಸಿಕ್ಸರ್‌ ಮತ್ತು ಬೌಂಡರಿ ಸಹಿತ 60 ರನ್ ಚಚ್ಚಿದ್ದರು.ಹೀಗಾಗಿ ಪಂಜಾಬ್ ಪಡೆ ಕುಸಿತದಿಂದ ಪಾರಾಗಿ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 180 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ್ದ ಚೆನ್ನೈ ಪಡೆಗೆ ಲಿಯಾಮ್ ಬೌಲಿಂಗ್‌ನಲ್ಲಿಯೂ ಕಾಟ ಕೊಟ್ಟರು. 30 ಎಸೆತಗಳಲ್ಲಿ 57 ರನ್ ಗಳಿಸಿ ಬೀಸಾಟವಾಡುತ್ತಿದ್ದ ಶಿವಂ ದುಬೆ ಅವರನ್ನು 15ನೇ ಓವರ್‌ನ ಐದನೇ ಎಸೆತದಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ನಂತರದ ಎಸೆತದಲ್ಲಿ ಆಲ್ರೌಂಡರ್‌ ಡ್ವೇನ್‌ ಬ್ರಾವೊ ವಿಕೆಟ್ ಕಬಳಿಸಿ ಪೆಟ್ಟು ನೀಡಿದರು. ಜೊತೆಗೆ 2 ಕ್ಯಾಚ್‌ಗಳನ್ನೂ ಪಡೆದು ಮಿಂಚಿದರು.

ಹೀಗಾಗಿ ಚೆನ್ನೈ ತಂಡ126ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 54 ರನ್ ಅಂತರದ ಸೋಲೊಪ್ಪಿಕೊಂಡಿತು.

108 ಮೀಟರ್‌ಸಿಕ್ಸರ್
ಪಂಜಾಬ್‌ ಜಯದ ರೂವಾರಿ ಲಿಯಾಮ್, ಈ ಬಾರಿಯ ಐಪಿಎಲ್‌ನಲ್ಲಿ ಅತಿ ದೊಡ್ಡ ಸಿಕ್ಸರ್‌ ಬಾರಿಸಿದ ಖ್ಯಾತಿಯನ್ನೂ ಪಡೆದರು.

ಮುಕೇಶ್ ಚೌಧರಿ ಅವರು ಪಂಜಾಬ್‌ ಇನಿಂಗ್ಸ್‌ನ ಐದನೇ ಓವರ್‌ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನುಮಿಡ್‌ ವಿಕೆಟ್‌ ಮೇಲೆ ಬಲವಾಗಿ ಬಾರಿಸಿದ ಲಿಯಾಮ್‌, ಚೆಂಡನ್ನು ಬರೋಬ್ಬರಿ 108 ಮೀಟರ್‌ ದೂರಕ್ಕೆ ಕಳುಹಿಸಿದರು. ಇದು ಈ ಬಾರಿಯ ಐಪಿಎಲ್‌ನಲ್ಲಿ ಅತಿ ದೊಡ್ಡ ಸಿಕ್ಸರ್ ಎನಿಸಿತು.

ಲಿಯಾಮ್‌ ಅವರೇ ಬಾರಿಸಿರುವ 105 ಮೀಟರ್‌ ಸಿಕ್ಸರ್‌ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್‌ತಂಡದ ಜಾಸ್‌ ಬಟ್ಲರ್‌ (101 ಮೀಟರ್‌)ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಇಶಾನ್ ಕಿಶನ್ (98 ಮೀಟರ್) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT