ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಫ್ರಾಂಚೈಸ್ ಪಂಜಾಬ್ ಕಿಂಗ್ಸ್ ತಂಡವು ಆಸ್ಟ್ರೇಲಿಯಾದ ಡೆಮಿಯನ್ ರೈಟ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ.

ರೈಟ್ ಅವರು ಆಸ್ಟ್ರೇಲಿಯಾದಲ್ಲಿ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಬಾಂಗ್ಲಾದೇಶದ 19 ವರ್ಷದೊಳಗಿನವರ ತಂಡಕ್ಕೂ ತರಬೇತಿ ನೀಡಿದ್ದಾರೆ. ಏಪ್ರಿಲ್ ಒಂಬತ್ತರಿಂದ ಆರಂಭವಾಗುವ ಐಪಿಎಲ್ ಟೂರ್ನಿಗಾಗಿ, ಪಂಜಾಬ್ ತಂಡದ ಮುಖ್ಯ ಕೋಚ್, ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವ ಹೋಬರ್ಟ್ ಹರಿಕೇನ್ಸ್, ಮೆಲ್ಬರ್ನ್ ಸ್ಟಾರ್ಸ್ ಅಲ್ಲದೆ ನ್ಯೂಜಿಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿಯೂ ಅವರು ಕಾರ್ಯಿರ್ವಹಿಸಿದ್ದಾರೆ. ಪಂಜಾಬ್ ತಂಡದ ನೆರವು ಸಿಬ್ಬಂದಿಯಾಗಿ ಸಹಾಯಕ ಕೋಚ್ ಆ್ಯಂಡಿ ಫ್ಲಾವರ್, ಬ್ಯಾಟಿಂಗ್ ಕೋಚ್ ವಾಸೀಂ ಜಾಫರ್ ಹಾಗೂ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.