ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಗೆಳೆಯ ಹಳೆಯ ಲಯಕ್ಕೆ ಮರಳುವುದು ಖಚಿತ: ಕೊಹ್ಲಿ ಬಗ್ಗೆ ಎಬಿಡಿ

ವಿರಾಟ್ ಕೊಹ್ಲಿ ಬಗ್ಗೆ ಎಬಿಡಿ ಭರವಸೆಯ ಮಾತು
Published 20 ಮಾರ್ಚ್ 2024, 16:01 IST
Last Updated 20 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಚೆನ್ನೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಆಪ್ತಮಿತ್ರ ವಿರಾಟ್ ಕೊಹ್ಲಿ ಅವರು ಮತ್ತೆ ತಮ್ಮ ಹಳೆಯ ವೈಭವಕ್ಕೆ ಮರಳಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ  ಕ್ತಿಕೆಟ್ ದಂತಕಥೆ ಎ.ಬಿ. ಡಿವಿಲಿಯರ್ಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರಾಟ್ ಅವರು ಕಳೆದ ಎರಡು ತಿಂಗಳುಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದರು. ವೈಯಕ್ತಿಕ ಕಾರಣಕ್ಕೆ ರಜೆ ಪಡೆದಿದ್ದ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ  ಆಡಿರಲಿಲ್ಲ. 

ಎಬಿಡಿ ಅವರು ತಮ್ಮ ಯೂಟ್ಯೂಬ್‌ನಲ್ಲಿ ಹಾಕಿರುವ ವಿಡಿಯೊದಲ್ಲಿ  ತಮ್ಮ ಗೆಳೆಯ ಕೊಹ್ಲಿ  ಕುರಿತು ಮೆಚ್ಚುಗೆಯ ಮಳೆಗರೆದಿದ್ದಾರೆ.

‘ಕಿಂಗ್‌ ಕೊಹ್ಲಿ ದಿಗ್ಗಜ. ಐಪಿಎಲ್‌ನಲ್ಲಿ 200 ಪಂದ್ಯಗಳಿಂದ  ಏಳು ಸಾವಿರ ರನ್ ಗಳಿಸಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಏನು ಬೇಕು. ಅವರು ಮರಳಿ ಅರಳುತ್ತಾರೆ’ ಎಂದು ಎಬಿಡಿ ಹೇಳಿದ್ದಾರೆ. 

ಸದ್ಯ ಆರ್‌ಸಿಬಿ ನಾಯಕರೂ ಆಗಿರುವ ತಮ್ಮದೇ ದೇಶದ ಫಫ್ ಡುಪ್ಲೆಸಿ ಅವರ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದ್ದಾರೆ.

‘ಫಫ್ ಫಾರ್ಮ್ ತುಸು ಕಡಿಮೆ ಇದೆ. ಸೌತ್ ಆಫ್ರಿಕಾ ಟಿ20 ಲೀಗ್ ಟೂರ್ನಿಯ ಅಂತ್ಯದಲ್ಲಿ  ಅವರು ಮಿಂಚಿದ್ದರು. ಅವರ ಆಟ ಆರ್‌ಸಿಬಿಯಲ್ಲಿಯೂ ಮುಂದುವರಿಯಲಿದೆ’ ಎಂದು ಎಬಿಡಿ ಹೇಳಿದ್ದಾರೆ.

ಲಾಕಿ ಫರ್ಗ್ಯುಸನ್, ರೀಸ್ ಟಾಪ್ಲಿ, ಮೊಹಮ್ಮದ್ ಸಿರಾಜ್, ಅಲ್ಝರಿ ಜೊಸೆಫ್ ಮತ್ತು ಕರ್ಣ ಶರ್ಮಾ, ಆಕಾಶ್ ದೀಪ್, ವೈಶಾಖ ವಿಜಯಕುಮಾರ್, ಯಶ್ ದಯಾಳ್, ಮಯಂಕ್ ದಾಗರ್ ಮತ್ತು ಹಿಮಾಂಶು ಶರ್ಮಾ, ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಕ್ಯಾಮರಾನ್ ಗ್ರೀನ್ ಮತ್ತು ಮಹಿಪಾಲ್ ಲೊಮ್ರೊರ್ ಅವರು ಇರುವ ಆರ್‌ಸಿಬಿ ತಂಡವು ಉತ್ತಮ ಆಟವಾಡುವ ಭರವಸೆಯನ್ನೂ ಎಬಿಡಿ ವ್ಯಕ್ತಪಡಿಸಿದ್ದಾರೆ. 

ರಾಜಸ್ಥಾನ್ ರಾಯಲ್ಸ್‌ ತಂಡದ 22 ವರ್ಷದ ಯಶಸ್ವಿ ಜೈಸ್ವಾಲ್ ಅವರ ಬಗ್ಗೆಯೂ ಎಬಿಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

‘ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಆಡಿರುವ ಸಾಧನೆಯು ಉತ್ತಮವಾಗಿದೆ. ಅವರು ಈ ಹಿಂದೆಯೂ ಟಿ20 ಮಾದರಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈಗಲೂ ಅವರು ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬಗ್ಗೆಯೂ ಅಪಾರ ನಿರೀಕ್ಷೆ ಇದೆ’ ಎಂದಿದ್ದಾರೆ. 

‘ಟೆಸ್ಟ್‌ ಸರಣಿಯಲ್ಲಿಯೇ 600ಕ್ಕೂ ಹೆಚ್ಚು ರನ್ ಗಳಿಸಿರುವ ಈ ಹುಡುಗ  (ಜೈಸ್ವಾಲ್) ಪಟಾಕಿಯಂತೆ ಸಿಡಿಯುವ ಭರವಸೆ ಇದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT