ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್– ಕಟು ನಿರ್ಧಾರ ಈಗ ಅಗತ್ಯವಿಲ್ಲ: ಐಒಸಿ

Last Updated 17 ಮಾರ್ಚ್ 2020, 19:19 IST
ಅಕ್ಷರ ಗಾತ್ರ

ಲೂಸನ್‌: ಜಗತ್ತಿನ ಅತಿ ದೊಡ್ಡ ಕ್ರೀಡಾ ಮೇಳವಾದ ಒಲಿಂಪಿಕ್‌ ಕ್ರೀಡೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಕಟು ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲವಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಮಂಗಳವಾರ ತಿಳಿಸಿದೆ.

ಕೊರೊನಾ ಪಿಡುಗಿನ ನಡುವೆಯೂ, ಐಒಸಿ ಟೋಕಿಯೊ ಒಲಿಂಪಿಕ್ಸ್‌ ಮುಂದೂಡುವ ನಿರ್ಧಾರ ಕೈಗೊಂಡಿಲ್ಲ.

‘ಟೋಕಿಯೊ ಒಲಿಂಪಿಕ್ಸ್‌ 2020 ಕ್ರೀಡೆಗಳನ್ನು ನಡೆಸುವುದಕ್ಕೆ ಐಒಸಿ ಪೂರ್ಣ ಬದ್ಧತೆ ಹೊಂದಿದೆ. ಕ್ರೀಡೆ ಆರಂಭವಾಗಲು ನಾಲ್ಕು ತಿಂಗಳಿಗೂ ಹೆಚ್ಚು ಅವಧಿ ಉಳಿದಿದೆ. ಈ ಹಂತದಲ್ಲಿ ಕಠಿಣ ನಿರ್ಧಾರಕ್ಕೆ ಬರುವಂಥ ತುರ್ತು ಇಲ್ಲ. ಈ ಹಂತದಲ್ಲಿ ಯಾವುದೇ ಉಹಾಪೋಹ ತಿರುಗುಬಾಣವಾಗಬಹುದು’ ಎಂದು ಐಒಸಿ, ಕಾರ್ಯಕಾರಿ ಸಮಿತಿಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.

ಟೋಕಿಯೊ ಒಲಿಂಪಿಕ್ಸ್‌ ಬರುವ ಜುಲೈ 24 ರಿಂದ ಆಗಸ್ಟ್‌ 9ರವರೆಗೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT