ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19ನಿಂದ ಚೇತರಿಕೆ: ಬಿಸಿಸಿಐ ಅನುಮತಿ ಪಡೆದು ತರಬೇತಿಗೆ ಮರಳಿದ ಚಾಹರ್

Last Updated 11 ಸೆಪ್ಟೆಂಬರ್ 2020, 13:39 IST
ಅಕ್ಷರ ಗಾತ್ರ

ದುಬೈ: ಕೋವಿಡ್‌–19 ಸೋಂಕಿನಿಂದ ಚೇತರಿಸಿಕೊಂಡಿರುವ, ಐಪಿಎಲ್‌ ಫ್ರ್ಯಾಂಚೈಸ್‌ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ವೇಗದ ಬೌಲರ್‌ ದೀಪಕ್‌ ಚಾಹರ್ ಅವರು ಶುಕ್ರವಾರ ತರಬೇತಿಗೆ ಮರಳಿದ್ದಾರೆ. ಬಿಸಿಸಿಐನಿಂದ ಅಗತ್ಯವಿದ್ದ ಅನುಮತಿಯನ್ನು ಅವರು ಪಡೆದುಕೊಂಡಿದ್ದಾರೆ.

ಎರಡು ಬಾರಿ ಕೋವಿಡ್‌ ಸೋಂಕು ಪರೀಕ್ಷೆ ಮಾಡಿಸಿಕೊಂಡು ‘ನೆಗೆಟಿವ್‌‘ ವರದಿ ತಂದ ಬಳಿಕ ಚಾಹರ್‌ ಬುಧವಾರ ತಂಡವನ್ನು ಸೇರಿಕೊಂಡಿದ್ದರು. ಅಭ್ಯಾಸ ಆರಂಭಿಸುವ ಮುನ್ನ ಬಿಸಿಸಿಐ ಮಾರ್ಗಸೂಚಿಗಳ ಅನ್ವಯ ಹೃದಯ ರಕ್ತನಾಳದ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

‘ಚಾಹರ್‌ ಅವರು ಶುಕ್ರವಾರದಿಂದ ಅಭ್ಯಾಸವನ್ನು ಆರಂಭಿಸಿದ್ದಾರೆ. ಬಿಸಿಸಿಐನಿಂದ ಅಗತ್ಯ ಅನುಮತಿಯನ್ನೂ ಪಡೆದುಕೊಂಡಿಕೊಂಡಿದ್ದಾರೆ. ತಂಡವು ಕಠಿಣ ಅಭ್ಯಾಸ ನಡೆಸುತ್ತಿದ್ದು, ಮೊದಲ ಪಂದ್ಯವನ್ನು ಎದುರು ನೋಡುತ್ತಿದ್ದೇವೆ‘ ಎಂದು ಸಿಎಸ್‌ಕೆ ತಂಡದ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.

ಇದೇ 19ರಂದು ನಡೆಯುವ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ಸ್ಅಪ್‌ ಸಿಎಸ್‌ಕೆ ತಂಡವು ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಸಿಎಸ್‌ಕೆ ತಂಡದಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿರುವ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕವಾಡ್ ಅವರು ಶನಿವಾರ ಪರೀಕ್ಷೆಗೆ ಒಳಗಾಗಲಿದ್ದಾರೆ.

ದುಬೈಗೆ ಬಂದಿಳಿದ ಬಳಿಕ ಸಿಎಸ್‌ಕೆ ತಂಡದ 13 ಮಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ತಂಡದ ಅಭ್ಯಾಸ ತಡವಾಗಿ ಆರಂಭವಾಗಿತ್ತು. ವೈಯಕ್ತಿಕ ಕಾರಣ ನೀಡಿ ಅನುಭವಿ ಆಟಗಾರರಾದ ಸುರೇಶ್‌ ರೈನಾ ಹಾಗೂ ಹರ್ಭಜನ್‌ ಸಿಂಗ್‌ ಟೂರ್ನಿಯಿಂದ ಹಿಂದೆ ಸರಿದಿದ್ದು, ತಂಡಕ್ಕಾದ ಮತ್ತೊಂದು ಹಿನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT