ಟೀಂ ಇಂಡಿಯಾ ಕೋಚ್ ಆಗುವಾಸೆಯಿದೆ: ಸೌರವ್ ಗಂಗೂಲಿ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗುವ ಇಚ್ಛೆಯಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
‘ಖಂಡಿತವಾಗಿಯೂ ಟೀಂ ಇಂಡಿಯಾದ ಕೋಚ್ ಆಗುವ ಆಸೆಯಿದೆ. ಆದರೆ ಈ ಬಾರಿಯಲ್ಲ. ಮುಂದೊಂದು ಬಾರಿ ಅರ್ಜಿ ಸಲ್ಲಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಚ್ ಕುರಿತು ಅಭಿಪ್ರಾಯ ಹೇಳುವ ಹಕ್ಕು ಕೊಹ್ಲಿಗೆ ಇದೆ: ಗಂಗೂಲಿ
ಸದ್ಯ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರೂ ಆಗಿದ್ದಾರೆ. ಕ್ರಿಕೆಟ್ ಕಾಮೆಂಟರಿ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಅವರು ಬಂಗಾಳಿ ಕ್ವಿಜ್ ಕಾರ್ಯಕ್ರಮವೊಂದನ್ನೂ ನಡೆಸಿಕೊಡುತ್ತಿದ್ದಾರೆ.
‘ಐಪಿಎಲ್, ಸಿಎಬಿ, ಕ್ರಿಕೆಟ್ ಕಾಮೆಂಟರಿ... ಹೀಗೆ ಸದ್ಯ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಮೊದಲು ಇವುಗಳನ್ನು ಪೂರ್ತಿಗೊಳಿಸುತ್ತೇನೆ. ಆದರೆ ಮುಂದೊಂದು ದಿನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಟೀಂ ಇಂಡಿಯಾ’ ಕೋಚ್ ಹುದ್ದೆಗೆ ಅರ್ಜಿ ಕರೆದ ಬಿಸಿಸಿಐ
ಟೀಂ ಇಂಡಿಯಾದ ಪ್ರಮುಖ ಯಶಸ್ವಿ ನಾಯಕರಲ್ಲೊಬ್ಬರಾಗಿರುವ ಗಂಗೂಲಿ ಕ್ರಿಕೆಟ್ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೇ ಸಮಿತಿ ರವಿ ಶಾಸ್ತ್ರಿ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆ ಮಾಡಿತ್ತು.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇತ್ತೀಚೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೋಚ್ ಹುದ್ದೆಗೆ ಅರ್ಜಿ ಕರೆದಿತ್ತು.
ಈ ಮಧ್ಯೆ, ರವಿ ಶಾಸ್ತ್ರಿ ಅವರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಒಲವು ತೋರಿದ್ದರೂ ಕೋಚ್ ಹುದ್ದೆಗೆ ಆಸ್ಟ್ರೇಲಿಯಾದ ಅನುಭವಿ ತರಬೇತುದಾರ ಟಾಮ್ ಮೂಡಿ ಒಳಗೊಂಡಂತೆ ಕೆಲವು ಅಂತರರಾಷ್ಟ್ರೀಯ ಮಾಜಿ ಆಟಗಾರರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಈಚೆಗೆ ವರದಿಯಾಗಿದೆ.
ಇದನ್ನೂ ಓದಿ: ಕೋಚ್ ಹುದ್ದೆ ರೇಸ್ನಲ್ಲಿ ಮೂಡಿ, ಜಯವರ್ಧನೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.