ಲಂಡನ್: ವಿಶ್ವದ ಅಗ್ರಗಣ್ಯ ಟಿ–20 ಬೌಲರ್, ಅಫ್ಗಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮುಂದಿನ ವರ್ಷ ನಡೆಯಲಿರುವ ‘ದಿ ಹಂಡ್ರೆಡ್’ (ನೂರು ಎಸೆತಗಳ ಇನಿಂಗ್ಸ್ನ ಕ್ರಿಕೆಟ್) ಟೂರ್ನಿಗೆ ಆಯ್ಕೆಯಾದ ಮೊದಲ ಸಾಗರೋತ್ತರ ಆಟಗಾರ ಎನಿಸಿದರು.

ಟಿ–20 ಮಾದರಿಯ ನಿಪುಣರಾದ ಕ್ರಿಸ್ ಗೇಲ್ ಮತ್ತು ಲಸಿತ್ ಮಾಲಿಂಗ, ಭಾನುವಾರ ನಡೆದ ಹರಾಜಿನಲ್ಲಿ ಸ್ಥಾನ ಪಡೆದಿಲ್ಲ. ರಶೀದ್ ಅವರನ್ನು ಟ್ರೆಂಟ್ ರಾಕೆಟರ್ಸ್ ₹ 1.25 ಕೋಟಿ (1.25 ಲಕ್ಷ ಪೌಂಡ್) ಕೊಟ್ಟು ಖರೀದಿಸಿದೆ.

ಆಸ್ಟ್ರೇಲಿಯಾ ಆಟಗಾರರಿಗೆ ಬೇಡಿಕೆ ಇತ್ತು. ಬ್ಯಾಟ್ಸ್ಮನ್ ಸ್ಟೀವನ್ ಸ್ಮಿತ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ವೆಲ್ಶ್ ಫೈರ್ ತಂಡ ತಲಾ 1.25 ಕೋಟಿಗೆ ಪಡೆದಿದೆ. ಡೇವಿಡ್ ವಾರ್ನರ್, ಸದರ್ನ್ ಬ್ರೇವ್ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಗೇಲ್, ಲಸಿತ್ ಕೂಡ ಪಟ್ಟಿಯಲ್ಲಿದ್ದರೂ ಅವರು ಸ್ಥಾನ ಪಡೆಯಲಿಲ್ಲ. ಎಂಟು ತಂಡಗಳು ಭಾಗವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.