ಮಂಗಳವಾರ, ಮಾರ್ಚ್ 28, 2023
29 °C

ಚೆನ್ನೈಯಲ್ಲಿ ಧೋನಿ-ವಿಜಯ್ ಭೇಟಿ; ಅಭಿಮಾನಿಗಳು ಫಿದಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಇಲ್ಲಿನ ಗೋಕುಲಂ ಸ್ಟುಡಿಯೊದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಭೇಟಿಯಾಗಿದ್ದಾರೆ.

ಇಬ್ಬರೂ ಶೂಟಿಂಗ್‌ ನಿಮಿತ್ತ ಸ್ಟುಡಿಯೋಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನಡೆದಿದೆ.

ಇದನ್ನೂ ಓದಿ: 

ಧೋನಿ, ಜಾಹೀರಾತಿನ ಶೂಟಿಂಗ್‌ಗಾಗಿ ಆಗಮಿಸಿದ್ದರೆ ವಿಜಯ್ ತಮ್ಮ ನೂತನ 'ಬೀಸ್ಟ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

 

 

ಧೋನಿ-ವಿಜಯ್ ಭೇಟಿಯು ಅಭಿಮಾನಿಗಳ ಪಾಲಿಗಂತೂ ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ ಅವರಿಬ್ಬರ ನಡುವಣ ಭೇಟಿಯ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 

ವಿಜಯ್, 2008ರಲ್ಲಿ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ರಾಯಭಾರಿಯಾದ ಬಳಿಕ ಧೋನಿ ಜೊತೆ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದು, ಹಲವಾರು ಭಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅಂದ ಹಾಗೆ ಇನ್ನು ಕೆಲವೇ ದಿನಗಳಲ್ಲಿ ಸಿಎಸ್‌ಕೆ ನಾಯಕ ಧೋನಿ ಐಪಿಎಲ್‌ನಲ್ಲಿ ಭಾಗವಹಿಸಲು ಯುಎಇಗೆ ತೆರಳಲಿದ್ದಾರೆ. ಅತ್ತ ವಿಜಯ್ ಬೀಸ್ಟ್ ಚಿತ್ರೀಕರಣಕ್ಕಾಗಿ ಯುರೋಪ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು