ಸೋಮವಾರ, ಫೆಬ್ರವರಿ 24, 2020
19 °C
ತಂಡದ ಆಯ್ಕೆ ಸೆ 4ರಂದು

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ: ಧೋನಿ ಬಿಟ್ಟು ಪಂತ್ ಆಯ್ಕೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎದುರಿನ ಟ್ವೆಂಟಿ–20 ಸರಣಿಗೆ ಭಾರತ ತಂಡದ ಆಯ್ಕೆಯನ್ನು ಸೆಪ್ಟೆಂಬರ್ 4ರಂದು ಮಾಡಲಾಗುವುದು. ಆದರೆ ವಿಕೆಟ್‌ ಕೀಪರ್ ಮಹೇಂದ್ರಸಿಂಗ್ ಧೋನಿ ಅವರನ್ನು ಆಯ್ಕೆಗೆ ಪರಿಗಣಿಸದೇ ಯುವ ಆಟಗಾರ ರಿಷಭ್ ಪಂತ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಸೆ 15ರಂದು ಧರ್ಮಶಾಲಾದಲ್ಲಿ, ಎರಡನೇ ಪಂದ್ಯವು ಮೊಹಾಲಿ (ಸೆ 18) ಮತ್ತು ಬೆಂಗಳೂರಿನಲ್ಲಿ (ಸೆ 22) ನಡೆಯಲಿದೆ.

ಈಚೆಗೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಸರಣಿಯಲ್ಲಿ 3–0ಯಿಂದ ಗೆದ್ದಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಬಳಗವನ್ನೇ ಇಲ್ಲಿಯ ಸರಣಿಗೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ವಿಂಡೀಸ್‌ ಸರಣಿಯಲ್ಲಿ ಧೋನಿ ಆಡಿರಲಿಲ್ಲ. ಸೇನೆಯಲ್ಲಿ ಗೌರವ ಕರ್ನಲ್ ಆಗಿರುವ ಧೋನಿ ಅವರು ಜಮ್ಮು–ಕಾಶ್ಮೀರದಲ್ಲಿ ಕೆಲವು ದಿನಗಳ ಸೇವೆ ಸಲ್ಲಿಸಲು ತೆರಳಿದ್ದರು.

‘ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಕೇವಲ 22 ಪಂದ್ಯಗಳನ್ನು ಆಡಲಿದೆ. ಆದ್ದರಿಂದ ಆಯ್ಕೆ ಸಮಿತಿಯು ತಂಡವನ್ನು ಸಿದ್ಧಗೊಳಿಸಲಿದೆ. ಹೆಚ್ಚು ಪ್ರಯೋಗಗಳಿಗೆ ಆಸ್ಪದ ಕೊಡುವುದು ಅನುಮಾನ. ಮೂವರು ಕೀಪರ್‌ಗಳನ್ನು ಆಡಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು