ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಲೀಪ್ ವೆಂಗಸರ್ಕರ್ ಅವರ ಆಳೆತ್ತರದ ಪ್ರತಿಮೆಯನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಗುವುದು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಬುಧವಾರ ಪ್ರಕಟಿಸಿದೆ. ಭಾರತದ ಕ್ರಿಕೆಟ್ ಮತ್ತು ಮುಂಬೈ ಕ್ರಿಕೆಟ್ಗೆ ಅವರು ಸಲ್ಲಿಸಿರುವ ಸೇವೆ ಗುರುತಿಸಿ ಗೌರವ ಸಲ್ಲಿಸಲು ಎಂಸಿಎ ಮುಂದಾಗಿದೆ.

ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಯಿತು. ರೈತ ಸಮುದಾಯದ ಜೊತೆ ಒಗ್ಗಟ್ಟಾಗಿ ನಿಲ್ಲಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ನೀಡಲೂ ಸಭೆಯು ನಿರ್ಧರಿಸಿತು. ಮುಂಬೈ ತಂಡದ ಆಟಗಾರರು ಈ ಉದ್ದೇಶಕ್ಕೆ ಒಟ್ಟಾಗಿ ₹25 ಲಕ್ಷ ನೀಡಲಿದ್ದಾರೆ.

ವೆಂಗಸರ್ಕರ್ ಅವರು 1976 ರಿಂದ 1992ರ ಅವಧಿಯಲ್ಲಿ 116 ಟೆಸ್ಟ್ ಹಾಗೂ 129 ಏಕದಿನ ಪಂದ್ಯಗಳನ್ನು ಆಡಿದ್ದರು. ಅವರು 10 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಅವರು 42.13 ಸರಾಸರಿಯಲ್ಲಿ 6,868 ರನ್ ಗಳಿಸಿದ್ದಾರೆ. 17 ಶತಕಗಳು ಮತ್ತು 35 ಅರ್ಧ ಶತಕಗಳು ಇದರಲ್ಲಿ ಒಳಗೊಂಡಿವೆ. ಏಕದಿನ ಪಂದ್ಯಗಳಲ್ಲಿ ಅವರು 23 ಶತಕಗಳನ್ನು ಒಳಗೊಂಡ 3,508 ರನ್ (34.73 ಸರಿ) ಗಳಿಸಿದ್ದಾರೆ. ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಜೂನ್ನಲ್ಲಿ ಅವರನ್ನು ಮಾಜಿ ನಾಯಕಿ ಡಯಾನ ಎಡುಲ್ಜಿ ಜೊತೆ ಮುಂಬೈ ಕ್ರಿಕೆಟ್ ಸಂಸ್ಥೆ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.