ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಕೋಲ್ಕತ್ತಕ್ಕೆ ‘ಸನ್‌’ ಸವಾಲು, ಮನೀಷ್ ಆಕರ್ಷಣೆ

ವಾರ್ನರ್‌‌ – ದಿನೇಶ್‌ ಮುಖಾಮುಖಿ
Last Updated 25 ಸೆಪ್ಟೆಂಬರ್ 2020, 20:18 IST
ಅಕ್ಷರ ಗಾತ್ರ
ADVERTISEMENT
""
""

ಅಬುಧಾಬಿ: ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ದಿನೇಶ್ ಕಾರ್ತಿಕ್ ಅವರ ನಾಯಕತ್ವದ ಕೋಲ್ಕತ್ತ ನೈಟ್‌ ರೈಟ್‌ ರೈಡರ್ಸ್‌ಗೆ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಸವಾಲೊಡ್ಡಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯ ಆಡಿವೆ. ಆದರೆ ಗೆದ್ದಿಲ್ಲ. ಅದರಿಂದಾಗಿ ಜಯದ ಆರಂಭ ಮಾಡಲು ತುದಿಗಾಲಿನಲ್ಲಿ ನಿಂತಿವೆ. ದಿನೇಶ್ ಬಳಗವು ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತು ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್‌ ಆರ್‌ಸಿಬಿ ಎದುರು ಸೋತಿದ್ದವು.

ಕೋಲ್ಕತ್ತ ತಂಡದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್, ಶುಭಮನ್ ಗಿಲ್, ನಿತೀಶ್ ರಾಣಾ, ಏಯಾನ್ ಮಾರ್ಗನ್ ಮತ್ತು ದಿನೇಶ್ ಅವರು ತಮ್ಮ ಎಂದಿನ ಲಯಕ್ಕೆ ಮರಳಿದರೆ ಹೆಚ್ಚು ರನ್‌ಗಳು ತಂಡದ ಖಾತೆ ಸೇರುತ್ತವೆ. ಅದೇ ರೀತಿ ಬೌಲಿಂಗ್‌ನಲ್ಲಿಯೂ ಪ್ಯಾಟ್‌ ಕಮಿನ್ಸ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರೆ, ಶಿವಂ ಮಾವಿ, ಸ್ಪಿನ್ನರ್ ಕುಲದೀಪ್ ಯಾದವ್ ಅವರೊಂದಿಗೆ ಕೈಜೋಡಿಸಿದಂತಾಗುತ್ತದೆ.

ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್‌ ಲೈನ್‌ ಅಪ್ ಚೆನ್ನಾಗಿದೆ. ವಾರ್ನರ್ ಹೋದ ಪಂದ್ಯದಲ್ಲಿ ಅನೂಹ್ಯ ರೀತಿಯಲ್ಲಿ ರನ್‌ಔಟ್ ಆಗಿದ್ದು ತಂಡಕ್ಕೆ ಹಿನ್ನಡೆಯಾಗಿತ್ತು. ಆದರೆ ಜಾನಿ ಬೆಸ್ಟೋ ಮತ್ತು ಮನೀಷ್ ಪಾಂಡೆ ಚೆನ್ನಾಗಿ ಆಡಿದ್ದರು. ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಈ ಪಂದ್ಯದಲ್ಲಿ ಅನುಭವಿ ಕೇನ್ ವಿಲಿಯಮ್ಸನ್ ಅವರಿಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಯುವ ಆಟಗಾರ ಪ್ರೀಯಂ ಗರ್ಗ್‌ಗೆ ಮತ್ತೊಂದು ಅವಕಾಶವೂ ಸಿಗಬಹುದು. ಅದರಲ್ಲೂ ಸ್ಪಿನ್ ಬೌಲರ್‌ಗಳ ವಿರುದ್ಧ ಆಡುವಲ್ಲಿ ಎಡವಿದ್ದರು. ತಣಡದಲ್ಲಿರುವ ಬೌಲಿಂಗ್ ಪಡೆಯು ಎದುರಾಳಿಗಳನ್ನು ಕಟ್ಟಿಹಾಕಲು ಸಮರ್ಥವಾಗಿದೆ. ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ಸ್ಪಿನ್ನರ್ ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಅವರು ಪಂದ್ಯದ ಫಲಿತಾಂಶವನ್ನು ತಮ್ಮ ತಂಡದ ಪರವಾಗಿ ಹೊರಳಿಸಿಕೊಳ್ಳುವ ಸಮರ್ಥರು. ಕೋಲ್ಕತ್ತದ ಸ್ಪೋಟಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಅವರು ಸಮರ್ಥರಾದರೆ ಹೈದರಾಬಾದ್ ಮೊದಲ ಜಯದ ಹಾದಿ ಹಿಡಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT