ಬುಧವಾರ, ಏಪ್ರಿಲ್ 1, 2020
19 °C

ಸಚಿನ್‌ರಿಂದ ಕೊಹ್ಲಿವರೆಗಿನ ಶ್ರೇಷ್ಠರನ್ನು ಹುರಿದುಂಬಿಸಿದ ದೇಶವಿದು: ಟ್ರಂಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಟೆರಾ: ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಸೇರಿದಂತೆ ಈಗಿನ ವಿರಾಟ್‌ ಕೊಹ್ಲಿಯವರೆಗಿನ ಎಲ್ಲ ಶ್ರೇಷ್ಠ ಆಟಗಾರರಿಗೆ ಪ್ರೋತ್ಸಾಹಿಸುತ್ತಿರುವ ದೇಶ ಭಾರತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಎರಡುದಿನಗಳ ಭೇಟಿ ಸಲುವಾಗಿ ಭಾರತಕ್ಕೆ ಆಗಮಿಸಿರುವ ಅವರು ಗುಜರಾತ್‌ನಲ್ಲಿ ಮಾತನಾಡಿದರು.

‘ಸಚಿನ್‌ ತೆಂಡೂಲ್ಕರ್ ಅವರಿಂದ ಆರಂಭವಾಗಿ ಈಗಿನ ವಿರಾಟ್‌ ಕೊಹ್ಲಿವರೆಗಿನ ಶ್ರೇಷ್ಠ ಆಟಗಾರರನ್ನು ಹುರಿದುಂಬಿಸುತ್ತಿರುವ ದೇಶವಿದು. ಪ್ರತಿಭೆ ಮತ್ತು ಸೃಜನಶೀಲತೆಗೆ ಹೆಸರಾಗಿರುವ ಭಾಂಗ್ರಾ (ಸಾಂಪ್ರದಾಯಿಕ ಶೈಲಿಯ ಸಂಗೀತ) ಮತ್ತು ಬಾಲಿವುಡ್‌ನ ಜಾಲವಿದು. ಡಿಡಿಎಲ್‌ಜೆ, ಶೋಲೆಯಂತಹ ಶ್ರೇಷ್ಠ ಸಿನಿಮಾಗಳನ್ನು ಖುಷಿಯಿಂದ ನೋಡುವ ದೊಡ್ಡವರ್ಗವೇ ಇಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರತಿವರ್ಷವೂ ಸರಿಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಸಿನಿಮಾ ನಿರ್ಮಿಸುವ ಭಾರತದ ಚಿತ್ರೋದ್ಯಮದ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ ಟ್ರಂಪ್‌, ‘ಪ್ರತಿಭೆ ಮತ್ತು ಸೃಜನಶೀಲತೆಗೆ ಹೆಸರಾದ ಬಾಲಿವುಡ್‌ನಂತ ಸಿನಿಮೋದ್ಯಮ ಇರುವ ಈ ದೇಶದಲ್ಲಿ, ಪ್ರತಿವರ್ಷ ಹತ್ತಿರತ್ತಿರ 2 ಸಾವಿರ ಸಿನಿಮಾಗಳನ್ನು ನಿರ್ಮಿಸಲಾಗುತ್ತದೆ’ ಎಂದಿದ್ದಾರೆ.

ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್‌ ಮೈದಾನ ಎನಿಸಿರುವ ಇಲ್ಲಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗಣದಲ್ಲಿ ನಡೆದ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್‌ ಜನರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು