ಮುಂಬೈ: ವಿದರ್ಭದ ವೇಗದ ಬೌಲರ್ ನಚಿಕೇತ್ ಭೂತೆ ಮತ್ತು ಮಧ್ಯಪ್ರದೇಶದ ತಂಡದ ಕುಮಾರ ಕಾರ್ತಿಕೇಯ ಸಿಂಗ್ ಅವರು ದುಲೀಪ್ ಟ್ರೋಫಿ ಫೈನಲ್ನಲ್ಲಿ ಆಡುವ ಕೇಂದ್ರ ವಲಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರೂ ಸೇರಿದಂತೆ ತಂಡದಲ್ಲಿ ನಾಲ್ಕು ಬದಲಾವಣೆಗಳಾಗಿವೆ.

ಕೇಂದ್ರ ವಲಯ ಇದೇ 11 ರಿಂದ ಬೆಂಗಳೂರಿನಲ್ಲಿ ನಡೆಯುವ ಫೈನಲ್ನಲ್ಲಿ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.

ಭೂತೆ ಅವರು ವಿದರ್ಭದವರೇ ಆದ ಯಶ್ ಠಾಕೂರ್ ಬದಲು, ಎಡಗೈ ಸ್ಪಿನ್ನರ್ ಕಾರ್ತಿಕೇಯ ಅವರು, ಹರ್ಷ್ ದುಬೆ ಬದಲು ಅವಕಾಶ ಪಡೆದಿದ್ದಾರೆ. ಮಧ್ಯಪ್ರದೇಶದ ಎಡ್ಗೈ ವೇಗಿ ಕುಲದೀಪ್ ಸೇನ್ ಮತ್ತು ರಾಜಸ್ತಾನದ ಎಡಗೈ ಸ್ಪಿನ್ನರ್ ಅಜಯ್ ಸಿಂಗ್ ಕುಕ್ನಾ ಅವರೂ ಅವಕಾಶ ಪಡೆದಿದ್ದಾರೆ.

ಠಾಕೂರ್, ದುಬೆ, ಖಲೀಲ್ ಅಹ್ಮದ್ ಅವರು ಆಸ್ಟ್ರೇಲಿಯಾ ‘ಎ’ ವಿರುದ್ಧ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ ಹೀಗಿದೆ: ರಜತ್ ಪಾಟೀದಾರ್ (ನಾಯಕ), ಆಯುಷ್ ಪಾಂಡೆ, ದಾನಿಶ್ ಮಾಳೆವಾರ್, ಶುಭಂ ಶರ್ಮಾ, ಸಂಚಿತ್ ದೇಸಾಯಿ, ಯಶ್ ರಾಥೋಡ್, ನಚಿಕೇತ್ ಭೂತೆ, ಕುಮಾರ ಕಾರ್ತಿಕೇಯ ಸಿಂಗ್, ಆದಿತ್ಯ ಠಾಕರೆ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಅಜಯ್ ಸಿಂಗ್ ಕುಕ್ನಾ, ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್), ದೀಪಕ್ ಚಾಹರ್, ಕುಲದೀಪ್ ಸೇನ್ ಮತ್ತು ಸಾರಾನ್ಶ್ ಜೈನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.