ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್ ಗಳಿಸಲು ಸಾಧ್ಯವಾಗದಿದ್ದರೆ, ಫೀಲ್ಡಿಂಗ್‌ನಲ್ಲಿ ಕೊಡುಗೆ ನೀಡುತ್ತೇನೆ: ಮಯಂಕ್

ಗೇಮ್ ಪ್ಲಾನ್ ಸ್ಪಷ್ಟವಿದ್ದರೆ ಯಾವುದೇ ಮಾದರಿಯಲ್ಲಿ ಯಶಸ್ವಿಯಾಗಬಹುದು ಎಂದ ಕನ್ನಡಿಗ
Last Updated 14 ಡಿಸೆಂಬರ್ 2019, 11:45 IST
ಅಕ್ಷರ ಗಾತ್ರ

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಬದಲುವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಗೆ ಸ್ಥಾನ ಪಡೆದಿರುವ ಕನ್ನಡಿಗ ಮಯಂಕ್ ಅಗರವಾಲ್‌, ಆಟಕ್ಕೆ ತಕ್ಕಂತೆ ಯೋಜನೆಗಳು ಸ್ಪಷ್ಟವಾಗಿದ್ದರೆ ಯಾವುದೇ ಮಾದರಿಯಲ್ಲೂ ಯಶಸ್ಸು ಸಾಧಿಸಬಹುದು. ಒಂದುವೇಳೆ ನಾನು ಬ್ಯಾಟಿಂಗ್‌ನಲ್ಲಿ ರನ್‌ ಗಳಿಸಲು ಸಾಧ್ಯವಾಗದೆ ಇದ್ದರೆ, ಫೀಲ್ಡಿಂಗ್‌ನಲ್ಲಿ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದುಹೇಳಿಕೊಂಡಿದ್ದಾರೆ.

ಭಾರತ ಪರ ಈ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿರುವ ಮಯಂಕ್‌, ಬಾಂಗ್ಲಾದೇಶ ಟೆಸ್ಟ್‌ ಸರಣಿ ಬಳಿಕ ಆಡಿದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ನಲ್ಲಿಯೂಕರ್ನಾಟಕ ಪರ ಯಶಸ್ವಿಯಾಗಿದ್ದರು. ಸಯ್ಯದ್‌.. ಸರಣಿ ಮುಗಿಯುತ್ತಿದ್ದಂತೆ ರಣಜಿ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ ಆರಂಭಿಸಿದ್ದರು. ಆದರೆ, ಗಾಯಗೊಂಡಿರುವ ಧವನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ, ದೇಶೀ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಅಗರವಾಲ್‌ ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

ಹೀಗೆ ಪದೇಪದೇ ಬೇರೆಬೇರೆ ಮಾದರಿಗಳಲ್ಲಿ ಕಣಕ್ಕಿಳಿಯುವ ಕುರಿತು ಹಾಗೂ ಅದರಲ್ಲಿ ಯಶಸ್ವಿಯಾಗುವ ಬಗ್ಗೆ ಬಿಸಿಸಿಐ ವೆಬ್‌ಸೈಟ್‌ನಲ್ಲಿ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ನಡೆಸುವ ‘ಚಾಹಲ್‌ ಟಿವಿ’ ಸಂದರ್ಶನದಲ್ಲಿ ಮಯಂಕ್‌ ಮಾತನಾಡಿದರು.

‘ನಾನು ಈ ರೀತಿಯಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಬೇರೆಬೇರೆ ಮಾದರಿಯಲ್ಲಿ ಆಡುವುದು ಮನಸ್ಥಿತಿಗೆ ಬಿಟ್ಟ ವಿಚಾರ. ಆಟಕ್ಕೆ ಸಂಬಂಧಿಸಿದಂತೆ ನಮ್ಮ ತಂತ್ರಗಾರಿಗೆ ಸ್ಪಷ್ಟವಾಗಿದ್ದರೆ ಮತ್ತು ಯಾವ ಮಾದರಿಯಲ್ಲಿ ಹೇಗೆ ಆಡಬೇಕು ಎಂಬ ನಿಖರತೆ ಇದ್ದರೆ, ಯಾವುದೇ ಮಾದರಿಗೆ ಒಗ್ಗಿಕೊಳ್ಳುವುದು ಸುಲಭ’ ಎಂದಿದ್ದಾರೆ.

‘ನಾನು ಎಲ್ಲಿ ಆಡಿದರೂ.. ತಂಡಕ್ಕಾಗಿಹೇಗೆ ಉಪಯುಕ್ತ ಆಟವಾಡಬಹುದು, ನಾನು ಹೇಗೆ ಕೊಡುಗೆ ನೀಡಬಲ್ಲೆ ಎಂಬುದರ ಬಗ್ಗೆ ಯಾವಾಗಲು ಯೋಚಿಸುತ್ತೇನೆ. ಒಂದುವೇಳೆ ಬ್ಯಾಟ್‌ನಿಂದ ರನ್‌ಗಳಿಸಲು ಸಾಧ್ಯವಾಗದಿದ್ದರೂ, ಫೀಲ್ಡಿಂಗ್‌ನಲ್ಲಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತೇನೆ. ಹೆಚ್ಚು ಉತ್ಸಾಹದಿಂದ ಫೀಲ್ಡಿಂಗ್‌ ಮಾಡುತ್ತೇನೆ’

‘ನಾನು ಪ್ರತಿ ಪಂದ್ಯವನ್ನೂ, ಪ್ರತಿ ಸರಣಿಯನ್ನೂ ಗೆಲ್ಲಲು ಬಯಸುತ್ತೇನೆ. ಯಾವಾಗ ಅಂತಹ ನಿಲುವು ತಳೆಯುತ್ತೇವೆಯೋ ಆಗ ನಮ್ಮಮನಸ್ಥಿತಿಯೂ ಉತ್ತಮವಾಗಿರುತ್ತದೆ. ಅದರಲ್ಲಿ ನಾವು ಶೇ. 100 ಫಲಿತಾಂಶ ಪಡೆಯುತ್ತೇವೆ ಎಂಬುದನ್ನು ನಿಖರವಾಗಿ ಹೇಳಲಾಗದು. ಆದರೆ, ಉತ್ತಮವಾಗಿ ಆಡುವ ಒಂದೊಳ್ಳೆ ಅವಕಾಶವನ್ನು ನಮಗೆ ನಾವೇ ಪಡೆದುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ಮಯಂಕ್‌ ಟೀಂ ಇಂಡಿಯಾ ಪರ ಒಟ್ಟು 8 ಟೆಸ್ಟ್‌ಗಳ 11 ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಅದರಲ್ಲಿ ಎರಡು ದ್ವಿಶತಕ, ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ ಒಟ್ಟು 754 ರನ್‌ ಗಳಿಸಿದ್ದಾರೆ. ಇದು 2019ರಲ್ಲಿ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಪರ ಬ್ಯಾಟ್ಸ್‌ಮನ್‌ವೊಬ್ಬರು ಗಳಿಸಿದ ಹೆಚ್ಚು ರನ್‌ ಆಗಿದೆ. ನಂತರದ ಸ್ಥಾನಗಳಲ್ಲಿ ಅಜಿಂಕ್ಯ ರಹಾನೆ (642), ವಿರಾಟ್‌ ಕೊಹ್ಲಿ (612) ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT