ಶುಕ್ರವಾರ, ಜನವರಿ 27, 2023
18 °C

ENG VS IND 1st Test| ಮಳೆಯಿಂದಾಗಿ ಮೊದಲ ಟೆಸ್ಟ್‌ ಡ್ರಾ: ಭಾರತಕ್ಕೆ ನಿರಾಸೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನಾಟಿಂಗ್‌ಹ್ಯಾಮ್‌ (ಪಿಟಿಐ): ವಿರಾಟ್‌ ಕೊಹ್ಲಿ ಬಳಗದ ಜಯದ ಉತ್ಸಾಹ ಮಳೆಯಲ್ಲಿ ಕೊಚ್ಚಿ ಹೋಯಿತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಕ್ರಿಕೆಟ್‌ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಭಾನುವಾರದ ಐದನೇ ದಿನದಾಟ ಒಂದೂ ಎಸೆತವನ್ನು ಕಾಣಲಿಲ್ಲ.

ಅಂತಿಮ ದಿನದಾಟಕ್ಕೆ ಭಾರತದ ಗೆಲುವಿಗೆ 157 ರನ್‌ ಬೇಕಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಭಾಗವಾಗಿ ನಡೆಯುತ್ತಿರುವ ಈ ಟೆಸ್ಟ್‌ನಲ್ಲಿ ಉಭಯ ತಂಡಗಳು ತಲಾ ನಾಲ್ಕು ಪಾಯಿಂಟ್ಸ್ ಗಳಿಸಿದವು.

ಒಟ್ಟಾರೆ ಪಂದ್ಯದಲ್ಲಿ ಗರಿಷ್ಠ 450 ಓವರ್‌ಗಳ ಬದಲಾಗಿ 250 ಓವರ್‌ಗಳನ್ನಷ್ಟೇ ಆಡಿಸಲು ಸಾಧ್ಯವಾಯಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಎರಡನೇ ಎರಡನೇ ಇನಿಂಗ್ಸ್‌ನಲ್ಲಿ 14 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿತ್ತು.

ಭಾರತವು ಗೆಲುವಿನ ಗುರಿ ತಲುಪದಂತೆ ತಡೆಯಲು ಇಂಗ್ಲೆಂಡ್ ಬೌಲರ್‌ಗಳು ವಿಶೇಷ ಪ್ರಯತ್ನವನ್ನೇ ಮಾಡಬೇಕಾಗಿತ್ತು.

‘ರನ್‌ ಗಳಿಸುವುದು ಸವಾಲಾಗಿದ್ದರೂ ಬ್ಯಾಟಿಂಗ್‌ ನಡೆಸುವುದು ಕಷ್ಟವಾಗುತ್ತಿರಲಿಲ್ಲ’ ಎಂದು ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 84 ರನ್ ಗಳಿಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಹೇಳಿದ್ದಾರೆ.

2018ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರಾಹುಲ್ ರನ್ ಗಳಿಸಲು ಪರದಾಡಿದ್ದರು. ಆದರೆ ಈಗ ಲಯ ಕಂಡುಕೊಂಡಿದ್ದರು. ಎರಡನೇ ಟೆಸ್ಟ್ ಪಂದ್ಯವು ಗುರು ವಾರದಿಂದ ಲಾರ್ಡ್ಸ್‌ನಲ್ಲಿ ನಡೆಯಲಿದೆ.

 

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್ (ಮೊದಲ ಇನಿಂಗ್ಸ್) 65.4 ಓವರ್‌ಗಳಲ್ಲಿ183. ಭಾರತ (ಮೊದಲ ಇನಿಂಗ್ಸ್) (84.5 ಓವರ್‌ಗಳಲ್ಲಿ 278. ಇಂಗ್ಲೆಂಡ್: ಎರಡನೇ ಇನಿಂಗ್ಸ್: (ಶುಕ್ರವಾರ 11.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 25) 85.5 ಓವರ್‌ಗಳಲ್ಲಿ 303 (ಜೋ ರೂಟ್‌ 109, ಸ್ಯಾಮ್ ಕರನ್ 32, ಡಾಮ್ ಸಿಬ್ಲಿ 28; ಜಸ್‌ಪ್ರೀತ್ ಬೂಮ್ರಾ 64ಕ್ಕೆ 5, ಮೊಹಮ್ಮದ್ ಸಿರಾಜ್‌ 84ಕ್ಕೆ 2). ಭಾರತ: 14 ಓವರ್‌ಗಳಲ್ಲಿ 1 ವಿಕೆಟ್‌ಗೆ 52 (ರಾಹುಲ್ 26).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು