ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Eng vs Ind: 5ನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಅಡ್ಡಿಯಾದ ಕೋವಿಡ್‌

Last Updated 10 ಸೆಪ್ಟೆಂಬರ್ 2021, 8:33 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್:‌ ಆತಿಥೇಯ ಇಂಗ್ಲೆಂಡ್‌ ಹಾಗೂ ಭಾರತ ತಂಡಗಳ ನಡುವಣ ಐದನೇ ಟೆಸ್ಟ್‌ ಪಂದ್ಯವು ಮ್ಯಾಂಚೆಸ್ಟರ್‌ನ ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಇಂದು (ಶುಕ್ರವಾರ) ನಿಗದಿಯಾಗಿತ್ತು. ಆದರೆ, ಭಾರತ ತಂಡದ ಕೋಚ್‌ಗಳಿಗೆ ಕೋವಿಡ್‌ ದೃಢಪಟ್ಟ ಕಾರಣ ಇಂದು ಪಂದ್ಯ ಆರಂಭವಾಗುವುದಿಲ್ಲ ಎಂದು ವರದಿಯಾಗಿದೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ದೀರ್ಘ ಸಮಾಲೋಚನೆಯ ಬಳಿಕ ಈ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗಿದೆ. ಹೀಗಾಗಿ ಪಂದ್ಯನಡೆಯುವಬಗ್ಗೆಯೂ ಅನುಮಾನಗಳು ಮೂಡಿವೆ.

ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆಭಾರತ ತಂಡದ ಕೋಚ್‌ ರವಿಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಮತ್ತು ಫೀಲ್ಡಿಂಗ್‌ ಕೋಚ್‌ ಆರ್.ಶ್ರೀಧರ್‌ ಅವರಿಗೆ ಕೋವಿಡ್‌ ದೃಢಪಟ್ಟಿತ್ತು.ಭಾರತ ತಂಡದ ಜೂನಿಯರ್ ಫಿಸಿಯೊ ಯೋಗೆೇಶ್ ಪರ್ಮಾರ್ ಅವರಿಗೆ ಸೋಂಕು ಇರುವುದು ಗುರುವಾರ ಖಚಿತವಾಗಿದೆ. ಇದರಿಂದಾಗಿ ತಂಡದ ಅಭ್ಯಾಸವನ್ನೂ ರದ್ದುಪಡಿಸಲಾಗಿತ್ತು.

ಹೀಗಾಗಿ ಐದನೇ ಪಂದ್ಯಕ್ಕೂ ಮುನ್ನ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಮೂಲಗಳ ಪ್ರಕಾರ, ಹೊಸದಾಗಿ ಸೋಂಕು ಖಚಿತವಾಗಿರುವ ಪ್ರಕರಣಗಳನ್ನು ಗಮನದಲ್ಲಿರಿಸಿ ಮತ್ತಷ್ಟು ಕೋವಿಡ್‌ ಪರೀಕ್ಷೆ ವರದಿಗಳನ್ನಾಧರಿಸಿ ಪಂದ್ಯ‌ ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಆದಾಗ್ಯೂ ಇಂಗ್ಲೆಂಡ್‌ ಪಾಳಯದಲ್ಲಿ ಕೋವಿಡ್‌ ಸಂಬಂಧಿತ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆತಿಥೇಯ ತಂಡ ಪಂದ್ಯದ ಆರಂಭವನ್ನು ಎದುರು ನೋಡುತ್ತಿರುವುದಾಗಿ ಜಾಸ್‌ ಬಟ್ಲರ್‌ ಹೇಳಿದ್ದಾರೆ.

ಪಂದ್ಯ ಆರಂಭದ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಪಂದ್ಯ ಆರಂಭವಾಗುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಬಳಗದಲ್ಲಿ ಎಲ್ಲವೂಸರಿಯಾಗಿದೆ ಎಂದಿದ್ದಾರೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದ ಮುನ್ನಡೆ ಗಳಿಸಿಕೊಂಡಿದೆ. ಹೀಗಾಗಿ ವಿರಾಟ್ ಕೊಹ್ಲಿ ಪಡೆಯು ಈ ಪಂದ್ಯವನ್ನೂ ಗೆದ್ದು ಜಯದ ಅಂತರ ಹೆಚ್ಚಿಸಿಕೊಳ್ಳುವ ಯೋಜನೆಯಲ್ಲಿದೆ.‌ ಆದರೆ, ಭಾರತವನ್ನು ಮಣಿಸಿ ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರ ಜೋ ರೂಟ್‌ ಬಳಗದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT