ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಟೆಸ್ಟ್: ಸ್ಟೋಕ್ಸ್‌ ನಾಯಕತ್ವಕ್ಕೆ ಕಿವೀಸ್ ಸವಾಲು

Last Updated 1 ಜೂನ್ 2022, 22:30 IST
ಅಕ್ಷರ ಗಾತ್ರ

ಲಂಡನ್: ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಗುರುವಾರದಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ.

ಇಂಗ್ಲೆಂಡ್ ತಂಡವು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಾಯಕತ್ವ ಮತ್ತು ಮುಖ್ಯ ಕೋಚ್ ಬ್ರೆಂಡನ್ ಮೆಕ್ಲಮ್ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಇದು ಇಂಗ್ಲೆಂಡ್ ತಂಡದ ಮಟ್ಟಿಗೆ ಹೊಸ ಯುಗದ ಆರಂಭ ಎನ್ನಲಾಗುತ್ತಿದೆ. ಆ್ಯಷಸ್ ಸರಣಿಯ ವೈಫಲ್ಯದ ನಂತರ ಜೋ ರೂಟ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಕ್ರಿಸ್ ಸಿಲ್ವರ್‌ವುಡ್ ಅವರನ್ನು ಕೋಚ್ ಹುದ್ದೆಯಿಂದ ಕೈಬಿಡಲಾಗಿತ್ತು. ಆಗ ಸ್ಟೋಕ್ಸ್‌ ನಾಯಕರಾಗಿ ನೇಮಕವಾದರು.

ವಿಶೇಷವೆಂದರೆ; ಸ್ಟೋಕ್ಸ್‌ ನ್ಯೂಜಿಲೆಂಡ್‌ನಲ್ಲಿ ಜನಿಸಿ ಇಂಗ್ಲೆಂಡ್‌ನಲ್ಲಿ ಬೆಳೆದವರು. ಮೆಕ್ಲಮ್ ಕಿವೀಸ್ ತಂಡದ ಮಾಜಿ ನಾಯಕರಾಗಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್ ತಂಡವಾಗಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ಮೆಕ್ಲಮ್ ಮತ್ತು ಬೆನ್ ತಂತ್ರಗಾರಿಕೆಯನ್ನು ಮೀರಿ ನಿಲ್ಲುವ ಸವಾಲು ಎದುರಾಗಿದೆ.

ತಂಡಗಳು

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್‌ಕೀಪರ್), ಜ್ಯಾಕ್ ಕ್ರಾಲಿ, ಅಲೆಕ್ಸ್ ಲೀಸ್, ಒಲಿ ಪೋಪ್, ಜೋ ರೂಟ್, ಜಾನಿ ಬೆಸ್ಟೊ, ಮ್ಯಾಟಿ ಪಾಟಿಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಹ್ಯಾರಿ ಬ್ರೂಕ್, ಕ್ರೇಗ್ ಎವರ್ಟನ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್‌ಕೀಪರ್), ಡೇವೊನ್ ಕಾನ್ವೆ, ಟಾಮ್ ಲಥಾಮ್, ಹೆನ್ರಿ ನಿಕೋಲ್ಸ್, ಡರಿಲ್ ಮಿಚೆಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್, ಕ್ಯಾಮ್ ಫ್ಲೆಚರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಕೈಲ್ ಜೆಮಿಸನ್, ನೀಲ್ ವಾಗ್ನರ್, ಮ್ಯಾಟ್ ಹೆನ್ರಿ, ಎಜಾಜ್ ಪಟೇಲ್

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸೋನಿ ಟೆನ್ ಒನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT