ಕ್ಯಾನ್‌ಬೆರಾ:ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 98 ರನ್‌ಗಳ ಸುಲಭ ಜಯ ದಾಖಲಿಸಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಕಾದಿತ್ತು.ಸೊನ್ನೆ ಸುತ್ತಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿಯರಿಬ್ಬರೂ ತಂಡದ ಮೊತ್ತ ಕೇವಲ 7 ರನ್ ಆಗಿವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಆದರೆ, ಮೂರನೇ ವಿಕೆಟ್‌ಗೆಜೊತೆಯಾದನಾಯಕಿ ಹೀದರ್ ನೈಟ್ ಮತ್ತು ನತಾಲಿ ಸ್ಕೀವರ್ ಮುರಿಯದ 169 ರನ್ ಕೂಡಿಸಿದರು.ಥಾಯ್ಲೆಂಡ್ ತಂಡದ 7 ಬೌಲರ್‌ಗಳು ಬೌಲಿಂಗ್ ಮಾಡಿದರೂಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತು.

52 ಎಸೆತಗಳನ್ನು ಎದುರಿಸಿದಸ್ಕೀವರ್ 8 ಬೌಂಡರಿ ಸಹಿತ 59 ರನ್ ಗಳಿಸಿದರೆ, ನೈಟ್ ಕೇವಲ 66 ಎಸೆತಗಳಲ್ಲಿ 13 ಬೌಂಡರಿ 4 ಭರ್ಜರಿ ಸಿಕ್ಸರ್ ಹೊಡೆದು 108 ರನ್ ಚಚ್ಚಿದರು.ಆ ಮೂಲಕ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಶತಕ ದಾಖಲಿಸಿದ ಆಟಗಾರ್ತಿ ಎನಿಸಿದರು.

ಈಸವಾಲಿನ ಗುರಿ ಬೆನ್ನತ್ತಿರುವ ಥಾಯ್ಲೆಂಡ್, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 78ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ್ತಿ ನಟ್ಟಕನ್ ಚಾಂತಮ್ (32),ನನ್ನಾಪತ್ ಕೊಂಚಾರೊಯೆಂಕೈ (12) ಹಾಗೂ ನರುಎಮೊಲ್ ಛೈವೈ (19) ಹೊರತುಪಡಿಸಿ ಉಳಿದವರ್ಯಾರೂ ಎರಡಂಕಿ ಮುಟ್ಟಲಿಲ್ಲ. ಹೀಗಾಗಿ ಜಯಕ್ಕಾಗಿ ಹೋರಾಟವನ್ನೇ ನಡೆಸ ಥಾಯ್ಲೆಂಡ್‌ಸುಲಭ ಸೋಲೊಪ್ಪಿಕೊಂಡಿತು.

ಇಂಗ್ಲೆಂಡ್ ವೇಗಿ ಅನ್ಯಾ ಶ್ರುಬ್ಸೋಲೆ 21 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಕೀವರ್ 2 ಮತ್ತು ಸೋಫಿ ಎಕ್ಲೆಸ್ಟೋನ್ 1 ವಿಕೆಟ್ ಉರುಳಿಸಿದರು.

ಥಾಯ್ಲೆಂಡ್‌ಹಾಗೂ ಇಂಗ್ಲೆಂಡ್ ತಮ್ಮ ಮುಂದಿನ ಪಂದ್ಯದಲ್ಲಿ (ಫೆಬ್ರುವರಿ 28ರಂದು) ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.