ಲಂಡನ್ : ಇಂಗ್ಲೆಂಡ್ ತಂಡ, ಓವಲ್ನಲ್ಲಿ ಗುರುವಾರ ಆರಂಭವಾದ ಆ್ಯಷಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಚಹ ವಿರಾಮದ ನಂತರ 283 ರನ್ಗಳಿಗೆ ಆಲೌಟ್ ಆಯಿತು. ಹ್ಯಾರಿ ಬ್ರೂಕ್ ಅವರು 85 ರನ್ (91ಎ, 4x11, 6x2) ಗಳಿಸಿ ಇಂಗ್ಲೆಂಡ್ ಮೊತ್ತದಲ್ಲಿ ಪ್ರಮುಖ ಕಾಣಿಕೆ ನೀಡಿದರು.

ಒಂದು ಹಂತದಲ್ಲಿ 3 ವಿಕೆಟ್ಗೆ 184 ರನ್ ಗಳಿಸಿದ್ದ ಆತಿಥೇಯ ತಂಡ ನಂತರ 28 ರನ್ ಅಂತರದಲ್ಲಿ ಬ್ರೂಕ್ ಅವರನ್ನೂ ಒಳಗೊಂಡು 4 ವಿಕೆಟ್ಗಳನ್ನು ಕಳೆದುಕೊಂಡು ಕುಸಿತ ಅನುಭವಿಸಿತು. ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ಎಂಟನೇ ವಿಕೆಟ್ಗೆ 41 ರನ್ ಸೇರಿಸಿದರು. ಆರಂಭ ಆಟಗಾರ ಬೆನ್ ಡಕೆಟ್ 41 ರನ್ ಗಳಿಸಿದ್ದರು.

ಕೊನೆಯವರಾಗಿ ನಿರ್ಗಮಿಸಿದ ವೋಕ್ಸ್ ಅವರ ವಿಕೆಟ್ ಸೇರಿದಂತೆ 82 ರನ್ಗಳಿಗೆ 4 ವಿಕೆಟ್ ಪಡೆದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಯಶಸ್ವಿ ಬೌಲರ್ ಎನಿಸಿದರು.

ಆಸ್ಟ್ರೇಲಿಯಾ 10 ಓವರುಗಳ ನಂತರ ವಿಕೆಟ್ ಕಳೆದುಕೊಳ್ಳದೇ 33 ರನ್ ಗಳಿಸಿತ್ತು.

2–1 ರಿಂದ ಮುಂದಿದ್ದು, ಈಗಾಗಲೇ ‘ಆ್ಯಷಸ್’ ಉಳಿಸಿಕೊಂಡಿರುವ ಆಸ್ಟ್ರೇಲಿಯಾ, ಈ ಟೆಸ್ಟ್ನಲ್ಲಿ ಸೋಲು ತಪ್ಪಿಸಿಕೊಂಡರೆ, ಇಂಗ್ಲೆಂಡ್ ನೆಲದಲ್ಲಿ 22 ವರ್ಷಗಳಲ್ಲಿ ಮೊದಲ ಬಾರಿ ಸರಣಿ ಗೆದ್ದಂತೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.