ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ವಿರುದ್ಧದ ಟೆಸ್ಟ್‌ ಸರಣಿ: ಇಂಗ್ಲೆಂಡ್‌ ತಂಡಕ್ಕೆ ಬ್ರೂಕ್‌ ಅಲಭ್ಯ

Published 21 ಜನವರಿ 2024, 14:10 IST
Last Updated 21 ಜನವರಿ 2024, 14:10 IST
ಅಕ್ಷರ ಗಾತ್ರ

ಲಂಡನ್‌: ಇಂಗ್ಲೆಂಡ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಹ್ಯಾರಿ ಬ್ರೂಕ್‌ ಅವರು ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ.  ವೈಯಕ್ತಿಕ ಕಾರಣದಿಂದ ಅವರು ತವರಿಗೆ ಮರಳಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭಾನುವಾರ ತಿಳಿಸಿದೆ.

ಸರಣಿಯ ಪೂರ್ವಸಿದ್ಧತಾ ಶಿಬಿರಕ್ಕಾಗಿ ಬ್ರೂಕ್ ಅವರು ತಂಡದೊಂದಿಗೆ ಅಬುಧಾಬಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿಂದಲೇ ಅವರು ಇಂಗ್ಲೆಂಡ್‌ಗೆ ವಾಪಸಾಗುವರು. ಕಾರಣವನ್ನು ಗೌಪ್ಯವಾಗಿಡುವಂತೆ ಬ್ರೂಕ್‌ ಕುಟುಂಬ ಮನವಿ ಮಾಡಿದೆ. ಹೈದರಾಬಾದ್‌ನಲ್ಲಿ ಗುರುವಾರದಿಂದ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಬ್ರೂಕ್ ಅವರ ಸ್ಥಾನಕ್ಕೆ ಬದಲಿಗೆ ಆಟಗಾರನನ್ನು ಪ್ರಕಟಿಸುವುದಾಗಿ ಇಸಿಬಿ ಹೇಳಿದೆ.

2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್‌ ಪಂದ್ಯ ಆಡಿದ್ದ 24 ವರ್ಷದ ಬ್ರೂಕ್‌ ಅವರು, ಈತನಕ 12 ಪಂದ್ಯಗಳಲ್ಲಿ 62.15ರ ಸರಾಸರಿಯಲ್ಲಿ 1181 ರನ್‌ ಗಳಿಸಿದ್ದಾರೆ. 2022ರಲ್ಲಿ ಪಾಕ್‌ ವಿರುದ್ಧದ ಟೆಸ್ಟ್‌ ಸರಣಿಯ ಐದು ಇನ್ನಿಂಗ್ಸ್‌ಗಳಲ್ಲಿ 93.60ರ ಸರಾಸರಿಯಲ್ಲಿ 468 ರನ್‌ ಕಲೆಹಾಕಿದ್ದ ಬ್ರೂಕ್‌, ಸರಣಿಯನ್ನು ಇಂಗ್ಲೆಂಡ್‌ ಕ್ವೀನ್‌ ಸ್ವೀಪ್‌ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT