ಶನಿವಾರ, ಜುಲೈ 24, 2021
27 °C

ಅಮೆರಿಕ ತಂಡದಲ್ಲಿ ಆಡುವೆ: ಪ್ಲಂಕೆಟ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಅವರು ಭವಿಷ್ಯದಲ್ಲಿ ಅಮೆರಿಕ ತಂಡದಲ್ಲಿ ಆಡುವುದಾಗಿ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಗೆ ಲಾಕ್‌ಡೌನ್‌ ಇದ್ದ ಕಾರಣ ಕ್ರಿಕೆಟ್ ಚಟುವಟಿಕೆಗಳು ನಡೆದಿರಲಿಲ್ಲ. ಈಚೆಗೆ ತರಬೇತಿಯನ್ನು ಮರು ಆರಂಭಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯು 55 ಆಟಗಾರರಿಗೆ ಬುಲಾವ್ ಕೊಟ್ಟಿತ್ತು. ಆದರೆ ಆ ಪಟ್ಟಿಯಲ್ಲಿ ಪ್ಲಂಕೆಟ್ ಇರಲಿಲ್ಲ. ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಚೊಚ್ಚಲ ಪ್ರಶಸ್ತಿ ಜಯಿಸಲು ಪ್ಲಂಕೆಟ್ ಆಟವೂ ಪ್ರಮುಖವಾಗಿತ್ತು.

‘ಅಮೆರಿಕದಲ್ಲಿ ಕ್ರಿಕೆಟ್ ಆಡುವುದು ಕೂಡ ಒಂದು ಒಳ್ಳೆಯ ಅನುಭವವಾಗಲಿದೆ. ನಾನು ಇಂಗ್ಲೆಂಡ್‌ನವನು. ಸದಾ ಬ್ರಿಟಿಷ್ ಆಗಿರುತ್ತೇನೆ. ದೈಹಿಕ ಸಾಮರ್ಥ್ಯ ನಿರಂತರವಾಗಿದ್ದರೆ ದೀರ್ಘ ಕಾಲದವರೆಗೆ ಆಡಬಲ್ಲೆ’ ಎಂದಿದ್ದಾರೆ.

ಪ್ಲಂಕೆಟ್ ಅವರ ಪತ್ನಿಯು ಅಮೆರಿಕ ಮೂಲದವರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು