ಶುಕ್ರವಾರ, ಏಪ್ರಿಲ್ 16, 2021
31 °C

IND vs ENG: ಪಿಚ್ ಬಗ್ಗೆ ಕೆವಿನ್ ಪೀಟರ್‌ಸನ್ ಹೇಳಿದ್ದೇನು?

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Former England cricket Kevin Pietersen (Reuters Photo)

ಅಹಮದಾಬಾದ್: ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಆದರೆ ಈ ಕ್ರೀಡಾಂಗಣದ ಪಿಚ್ ಕುರಿತು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್‌ಸನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಬ್ಯಾಟಿಂಗ್ ಕೌಶಲ್ಯ ಹಾಗೂ ತಂತ್ರಗಾರಿಕೆ ಪರೀಕ್ಷಿಸ್ಪಡುವ ಇಂತಹ ಪಿಚ್‌ಗಳು ಒಂದು ಪಂದ್ಯಕ್ಕೆ ಯೋಗ್ಯ. ಆದರೆ ಇಂತಹ ವಿಕೆಟ್‌ಗಳನ್ನು ನಾನು ನೊಡಲು ಬಯಸಲಾರೆ. ನನಗನಿಸುತ್ತದೆ ಯಾವ ಆಟಗಾರನೂ ಇದನ್ನು ಇಷ್ಟಪಡಲಾರರು. ಅತ್ಯುತ್ತಮ, ಭಾರತ ಎಂದು ಹೇಳಿದ್ದಾರೆ.

ಕೆವಿನ್ ಹಿಂದಿ ಟ್ವೀಟ್‌ಗೆ ಜನರು ಮಿಶ್ರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರೆ, ಮತ್ತೆ ಹಲವು ಟ್ರೋಲ್ ಮಾಡತೊಡಗಿದ್ದಾರೆ.

ಮೊಟೇರಾ ಕ್ರೀಡಾಂಗಣದ ಪಿಚ್ ಕುರಿತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಕೂಡ ಹೇಳಿಕೆ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು