ಮ್ಯಾಂಚೆಸ್ಟರ್ : ಕೊರೊನಾ ಕಾಲದ ಮೊಟ್ಟಮೊದಲ ಟೆಸ್ಟ್ ಸರಣಿಯನ್ನು ನಡೆಸಿ ಯಶಸ್ವಿಯಾಗಿರುವ ಇಂಗ್ಲೆಂಡ್ ಈಗ ಮತ್ತೊಂದು ಹೆಜ್ಜೆ ಮುಂದಿಡಲಿದೆ.

ಬುಧವಾರ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನುಡಿ ಬರೆಯಲಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಜೋ ರೂಟ್ ನಾಯಕತ್ವದ ಬಳಗವನ್ನು ಅಜರ್ ಅಲಿ ನಾಯಕತ್ವದ ತಂಡವು ಎದುರಿಸಲಿದೆ. ಹೋದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 2–1ರಿಂದ ಇಂಗ್ಲೆಂಡ್ ಜಯಿಸಿತ್ತು. ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್ ಅವರ ಅಮೋಘ ಆಟದಿಂದಾಗಿ ಇಂಗ್ಲೆಂಡ್ ಮಿಂಚಿತ್ತು.

ಕೊರೊನಾ ವೈರಾಣುವಿನ ಸೋಂಕು ತಡೆಗೆ ಐಸಿಸಿ ಮತ್ತು ಇಸಿಬಿ ರೂಪಿಸಿರುವ ಜೀವ ಸುರಕ್ಷಾ ನಿಯಮದಡಿಯಲ್ಲಿ ಸರಣಿಯು ನಡೆಯಲಿದೆ. ಒಂದು ತಿಂಗಳ ಹಿಂದೆಯೇ ಪಾಕ್ ಬಳಗವು ಇಂಗ್ಲೆಂಡ್ಗೆ ಬಂದಿತ್ತು. 2018ರಲ್ಲಿ ಇಂಗ್ಲೆಂಡ್ ಮತ್ತು ಪಾಕ್ ಮುಖಾಮುಖಿಯಾಗಿದ್ದ ಟೆಸ್ಟ್ ಸರಣಿಯು ಸಮಬಲವಾಗಿತ್ತು.

ಇತಿಹಾಸದಲ್ಲಿ ಒಟ್ಟು 83 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಅದರಲ್ಲಿ ಇಂಗ್ಲೆಂಡ್ 25 ಮತ್ತು ಪಾಕ್ 21 ಬಾರಿ ಜಯಿಸಿವೆ. 37 ಪಂದ್ಯಗಳು ಡ್ರಾ ಆಗಿವೆ. ಉತ್ತಮ ಲಯದಲ್ಲಿರುವ ಇಂಗ್ಲೆಂಡ್ ತಂಡವನ್ನು ಮಣಿಸಲು ಪಾಕ್ಪಡೆಯು ವಿಶೇಷ ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಇದೆ. ಬಾಬರ್ ಆಜಂ, ಅಜರ್ ಅಲಿ, ಯಾಸಿರ್ ಶಾ ಅವರ ಅನುಭವದ ಆಟವು ಪ್ರಮುಖವಾಗಲಿದೆ. ಕೋವಿಡ್ –19 ಕಾಲಘಟ್ಟದಲ್ಲಿ ಪಾಕಿಸ್ತಾನ ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ.

ತಂಡಗಳು: ಇಂಗ್ಲೆಂಡ್: ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ಕೀಪರ್), ರೋರಿ ಬರ್ನ್ಸ್, ಡಾಮ್ನಿಕ ಸಿಬ್ಲಿ, ಜ್ಯಾಕ್ ಕ್ರಾಲಿ, ಬೆನ್ ಸ್ಟೋಕ್ಸ್, ಒಲಿ ಪೋಪ್, ಡಾಮ್ನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಯಾಮ್ ಕರನ್.

ಪಾಕಿಸ್ತಾನ: ಅಜರ್ ಅಲಿ (ನಾಯಕ), ಮೊಹ್ಮದ್ ರಿಜ್ವಾನ್ (ವಿಕೆ್ಟ್ಕೀಪರ್), ಶಾನ್ ಮಸೂದ್, ಅಬಿದ್ ಅಲಿ, ಬಾಬರ್ ಅಜಂ, ಅಸದ್ ಶಫಿಕ್, ಶೋಯಬ್ ಖಾನ್, ಯಾಸಿರ್ ಶಾ, ಮೊಹಮ್ಮದ್ ಅಬ್ಆಸ್, ಶಾಹೀನ್ ಆಫ್ರಿದಿ, ನಸೀಂ ಶಾಹ, ಫವಾದ್ ಅಸ್ಲಂ, ಸೊಹೈಲ್ ಖಾನ್, ಸರ್ಫರಾಜ್ ಅಹಮದ್, ಇಮಾಮ್ ಉಲ್ ಹಕ್, ಖಾಶಿಫ್ ಭಟ್ಟಿ.

ನೇರಪ್ರಸಾರ: ಸೋನಿ ಸಿಕ್ಸ್

ಸಮಯ: ಮಧ್ಯಾಹ್ನ 3.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.