ಸೋಮವಾರ, ಮೇ 17, 2021
21 °C
ಮೊದಲ ಟಿ20 ಪಂದ್ಯ ಇಂದು: ಇಂಗ್ಲೆಂಡ್–ಪಾಕಿಸ್ತಾನ ಹಣಾಹಣಿ

ಮಾರ್ಗನ್–ಬಾಬರ್ ಬಳಗಗಳ ಮುಖಾಮುಖಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್: ಸತತ ಜಯ ಸರಣಿಗಳ ಜಯದಲ್ಲಿ ವಿಹರಿಸುತ್ತಿರುವ ಇಂಗ್ಲೆಂಡ್ ತಂಡವು ಶುಕ್ರವಾರ ಪಾಕಿಸ್ತಾನ ತಂಡದ ಎದುರು ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಆಡಲಿದೆ.

ಪಾಕ್ ಎದುರಿನ ಟೆಸ್ಟ್ ಸರಣಿಯಲ್ಲಿ ಗೆದ್ದಿರುವ ಇಂಗ್ಲೆಂಡ್ ಭರ್ತಿ ಆತ್ಮವಿಶ್ವಾಸದಲ್ಲಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಏಯಾನ್ ಮಾರ್ಗನ್ ತಂಡವನ್ನು ಮುನ್ನಡೆಸುವರು. ಅವರೊಂದಿಗೆ ಜಾನಿ ಬೇಸ್ಟೊ, ಸ್ಯಾಮ್ ಬಿಲ್ಲಿಂಗ್ಸ್‌, ಮೋಯಿನ್ ಅಲಿ, ಜೋ ಡೆನ್ಲಿ  ಇದ್ದಾರೆ. ಆದರೆ ಜೇಸನ್ ರಾಯ್ ತಂಡದಲ್ಲಿ ಹೊರಬಿದ್ದಿರುವುಚು ಇಂಗ್ಲೆಂಡ್‌ ಬಳಗದಲ್ಲಿ ಬೇಸರ ಮೂಡಿಸಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ಅಭ್ಯಾಸ ನಡೆಸಿದ್ದ ಸಮಯದಲ್ಲಿ ಅವರು ಗಾಯಗೊಂಡಿದ್ದಾರೆ. ಅದರಿಂದಾಗಿ ಅವರು ಕಣಕ್ಕಿಳಿಯುತ್ತಿಲ್ಲ. ಆಸ್ಟ್ರೇಲಿಯಾದ ಎದುರು ಸೆಪ್ಟೆಂಬರ್ 4ರಿಂದ ಆರಂಭವಾಗುವ ಸರಣಿಯಲ್ಲಿ ಅವರು ಮರಳುವ ನಿರೀಕ್ಷೆ ಇದೆ.

ಮೊದಲ ಟೆಸ್ಟ್‌ನಲ್ಲಿ ಸ್ವಲ್ಪ ಅಂತರದಲ್ಲಿ ಸೋತಿದ್ದ ಪಾಕಿಸ್ತಾನ ನಂತರದ ಎರಡೂ ಟೆಸ್ಟ್‌ಗಳಲ್ಲಿ ದಿಟ್ಟ ಹೋರಾಟ ಮಾಡಿತ್ತು. ಆದರೆ, ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್‌ನಲ್ಲಿ ಟಿ20 ಸರಣಿ ಗೆಲ್ಲುವ ಮಹತ್ವಾಕಾಂಕ್ಷೆಯೊಂದಿಗೆ ಬಾಬರ್  ಆಜಂ ಬಳಗವು ಕಣಕ್ಕಿಳಿಯಲಿದೆ. ಸರಣಿಯ ಎಲ್ಲ ಮೂರು ಪಂದ್ಯಗಳೂ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿಯೇ ನಡೆಯಲಿವೆ.

ತಂಡಗಳು: ಇಂಗ್ಲೆಂಡ್:  ಏಯಾನ್ ಮಾರ್ಗನ್ (ನಾಯಕ), ಡೇವಿಡ್ ಮೆಲಾನ್, ಮೋಯಿನ್ ಅಲಿ, ಜೋ ಡೆನ್ಲಿ, ಲೂಯಿಸ್ ಗ್ರೆಗರಿ, ಟಾಮ್ ಕ್ರಾಲಿ, ಡೇವಿಡ್ ವಿಲ್ಲಿ, ಜಾನಿ ಬೇಸ್ಟೊ (ವಿಕೆಟ್‌ಕೀಪರ್), ಸ್ಯಾಮ್ ಬಿಲ್ಲಿಂಗ್ಸ್‌,  ಟಾಮ್ ಬ್ಯಾಂಟಮ್, ಕ್ರಿಸ್ ಜೋರ್ಡನ್,  ಆದಿಲ್ ರಶೀದ್, ಸಕೀಬ್ ಮೊಹಮ್ಮದ್

ಪಾಕಿಸ್ತಾನ:ಬಾಬರ್  ಆಜಂ (ನಾಯಕ), ಖುಷ್‌ದಿಲ್ ಶಾ, ಇಫ್ತಿಕಾರ್ ಅಹಮದ್, ಶೋಯಬ್ ಮಲಿಕ್, ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಸರ್ಫರಾಜ್ ಅಹಮದ್ (ವಿಕೆಟ್‌ಕೀಪರ್), ಹ್ಯಾರಿಸ್ ರವುಫ್,  ಮೊಹಮ್ಮದ್ ಆಮೀರ್, ಶಾಹೀನ್ ಆಫ್ರಿದಿ, ಯಾಸೀರ್ ಶಾ, ಮೊಹಮ್ಮದ್ ಅಬ್ಬಾಸ್, ವಹಾಬ್ ರಿಯಾಜ್.

ನೇರಪ್ರಸಾರ: ಸೋನಿ ಸಿಕ್ಸ್

ಸಮಯ: ರಾತ್ರಿ 10.30 (ಭಾರತೀಯ ಕಾಲಮಾನ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು