ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ vs ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯ ಮರು ನಿಗದಿ

Last Updated 22 ಅಕ್ಟೋಬರ್ 2021, 15:17 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ಕೋವಿಡ್‌ನಿಂದಾಗಿ ರದ್ದುಗೊಂಡಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಆಯೋಜಿಸಲು ಉಭಯ ಮಂಡಳಿಗಳು ಸಮ್ಮತಿ ಸೂಚಿಸಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಬೇಕಿದ್ದ ಪಂದ್ಯವನ್ನು 2021 ಜುಲೈ 1ಕ್ಕೆ ಮರು ನಿಗದಿಗೊಳಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ಇದರೊಂದಿಗೆ ಕೊನೆಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಡುವೆ ಒಮ್ಮತ ಮೂಡಿಬಂದಿದೆ. ಭಾರತದ ಪಾಳಯದಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಅಂತಿಮ ಟೆಸ್ಟ್ ಪಂದ್ಯದ ಬಳಿಕ ಇಂಗ್ಲೆಂಡ್ ವಿರುದ್ಧ ತಲಾ ಮೂರು ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಭಾರತ ಭಾಗವಹಿಸಲಿದೆ. ಜುಲೈ 17ರಂದು ಭಾರತದ ಪ್ರವಾಸಕೊನೆಗೊಳ್ಳಲಿದೆ.

'ಇದುವರೆಗಿನ ಅದ್ಭುತ ಟೆಸ್ಟ್ ಸರಣಿಗೆ ಯೋಗ್ಯವೆನಿಸುವ ಅಂತ್ಯವನ್ನು ರೂಪಿಸಲು ಬಿಸಿಸಿಐ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ' ಎಂದು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ತಿಳಿಸಿದ್ದಾರೆ.

ಪರಿಷ್ಕೃತ ವೇಳಾಪಟ್ಟಿ ಇಂತಿದೆ:

ಜು. 1ರಿಂದ 5ರ ವರೆಗೆ: ಅಂತಿಮ ಟೆಸ್ಟ್, ಎಜ್‌ಬಾಸ್ಟನ್

ಟ್ವೆಂಟಿ-20 ಸರಣಿ ವೇಳಾಪಟ್ಟಿ:
ಜು. 7: ಮೊದಲ ಟ್ವೆಂಟಿ-20, ಏಜೀಸ್ ಬೌಲ್
ಜು. 9: ಎರಡನೇ ಟ್ವೆಂಟಿ-20, ಎಜ್‌ಬಾಸ್ಟನ್
ಜು. 10: ಅಂತಿಮ ಟ್ವೆಂಟಿ-20, ಟ್ರೆಂಟ್ ಬ್ರಿಡ್ಜ್

ಏಕದಿನ ಸರಣಿ ವೇಳಾಪಟ್ಟಿ:
ಜು. 12: ಮೊದಲ ಏಕದಿನ , ದಿ ಓವಲ್
ಜು. 14: ದ್ವಿತೀಯ ಏಕದಿನ, ಲಾರ್ಡ್ಸ್.
ಜು. 17: ಅಂತಿಮ ಏಕದಿನ, ಓಲ್ಡ್ ಟ್ರಾಫರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT