ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಸಿಕ್ಕ ವಿರಾಮವನ್ನು ಸಮರ್ಥವಾಗಿ ಬಳಸಿಕೊಂಡ ಮೊಹಮ್ಮದ್ ಸಿರಾಜ್ ತಮ್ಮ ಕೌಶಲಗಳನ್ನು ಸುಧಾರಿಸಿಕೊಂಡರು. ಫಿಟ್ನೆಸ್ ಉತ್ತಮಗೊಳಿಸಿಕೊಂಡರು. ಅದರ ಫಲ ಐಪಿಎಲ್ ಟೂರ್ನಿಯಲ್ಲಿ ಅವರಿಗೆ ಲಭಿಸುತ್ತಿದೆ.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮ್ಮ ನಿಕಟಪೂರ್ವ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೂ ಅವರು ಕಾರಣರಾದರು. ಸಿರಾಜ್ (19ಕ್ಕೆ3) ಅಮೋಘ ಬೌಲಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡವು 8 ವಿಕೆಟ್ಗಳ ಸುಲಭ ಗೆಲುವನ್ನೂ ಸಾಧಿಸಿತು. ಏಳು ವರ್ಷ ಆರ್ಸಿಬಿಯಲ್ಲಿ ಆಡಿದ್ದವರು ಸಿರಾಜ್. ಈ ವರ್ಷ ಅವರನ್ನು ತಂಡವು ರಿಲೀಸ್ ಮಾಡಿತ್ತು ಮೆಗಾ ಹರಾಜಿನಲ್ಲಿ ಸಿರಾಜ್ ಅವರನ್ನು ಗುಜರಾತ್ ತಂಡವು ಖರೀದಿಸಿತ್ತು.

ಪವರ್ಪ್ಲೇನಲ್ಲಿಯೇ ಎರಡು ವಿಕೆಟ್ ಗಳಿಸಿದ್ದ ಸಿರಾಜ್ ಆತಿಥೇಯ ತಂಡಕ್ಕೆ ಆರಂಭಿಕ ಪೆಟ್ಟು ಕೊಟ್ಟಿದ್ದರು. ಪಂದ್ಯಶ್ರೇಷ್ಠ ಗೌರವ ಪಡೆದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸತತವಾಗಿ ಪಂದ್ಯಗಳಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ನನ್ನ ಲೋಪಗಳನ್ನು ಗುರುತಿಸಿ ಸುಧಾರಿಸಿಕೊಳ್ಳಲು ಸಮಯ ಸಾಕಾಗುತ್ತಿರಲಿಲ್ಲ. ಪಂದ್ಯಕ್ಕೆ ಸಿದ್ಧವಾಗುವುದರತ್ತ ಹೆಚ್ಚು ಗಮನ ಇರುತ್ತಿತ್ತು. ಆದರೆ ಕೆಲವು ಅಂತರರಾಷ್ಟ್ರೀಯ ಸರಣಿಗಳಲ್ಲಿ ಆಡುವುದರಿಂದ ಬಿಡುವು ಸಿಕ್ಕಾಗ ಬೌಲಿಂಗ್ ಸುಧಾರಣೆಯತ್ತ ಹೆಚ್ಚು ಚಿತ್ತ ನೆಟ್ಟಿದ್ದೆ’ ಎಂದರು.

'ನಾನು ಗುಜರಾತ್ ತಂಡವನ್ನು ಸೇರಿದ ಮೇಲೆ ಆಶು ಭಾಯ್ ( ಕೋಚ್ ಆಶಿಶ್ ನೆಹ್ರಾ) ಅವರೊಂದಿಗೆ ಮಾತನಾಡಿದೆ. ಅವರು ನೀಡಿದ ಸಲಹೆ ಫಲಪ್ರದವಾಗಿವೆ. ನನ್ನ ಬೌಲಿಂಗ್ ಉತ್ತಮವಾಗಿದೆ. ತಂಡದಲ್ಲಿರುವ ಕಗಿಸೊ ರಬಾಡ, ಇಶಾಂತ್ ಶರ್ಮಾ ಮತ್ತು ಇನ್ನುಳಿದ ಬೌಲರ್ಗಳೊಂದಿಗೂ ಚರ್ಚಿಸುತ್ತೇನೆ. ಸಲಹೆ ಪಡೆದಿದ್ದೇನೆ. ಅವೆಲ್ಲವೂ ಬಹಳ ಉಪಯುಕ್ತವಾಗಿವೆ. ನಮ್ಮ ಮೇಲೆ ನಾವು ನಂಬಿಕೆ ಇಟ್ಟುಕೊಳ್ಳುವುದು ಮುಖ್ಯ ಎಂಬ ಅರಿವು ಮೂಡಿದೆ’ ಎಂದು 31 ವರ್ಷದ ಸಿರಾಜ್ ಹೇಳಿದರು.

‘ಬೇಗ ವಿಕೆಟ್ಗಳ ಪತನ: ಸೋಲಿಗೆ ಕಾರಣ’

‘ಅಗ್ರಕ್ರಮಾಂಕದ ಬ್ಯಾಟರ್ಗಳು ಬೇಗ ಔಟಾಗಿದ್ದರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಪವರ್ಪ್ಲೇ ನಲ್ಲಿಯೇ ಮೂರು ವಿಕೆಟ್ ಕಳೆದುಕೊಂಡೆವು. ಅದರ ನಂತರವೂ 190 ರನ್ಗಳ ಮೊತ್ತದ ನಿರೀಕ್ಷೆಯಲ್ಲಿದ್ದೆವು ’ ಎಂದು ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಹೇಳಿದರು. ‘ಜಿತೇಶ್ ಶರ್ಮಾ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಟಿಮ್ ಡೇವಿಡ್ ಅವರು ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅದರಿಂದಾಗಿ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು’ ಎಂದರು. ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ 20ಓವರ್ಗಳಲ್ಲಿ 8 ವಿಕೆಟ್ಗಳಿಗೆ 169 ರನ್ ಗಳಿಸಿತು. ಅದಕ್ಕುತ್ತರವಾಗಿ ಗುಜರಾತ್ ತಂಡವು 17.5 ಓವರ್ಗಳಲ್ಲಿ 2 ವಿಕೆಟ್ಗಳಿಗೆ 170 ರನ್ ಗಳಿಸಿ ಜಯಿಸಿತು. ಜೋಸ್ ಬಟ್ಲರ್ ಅಜೇಯ 73 ಮತ್ತು ಸಾಯಿ ಸುದರ್ಶನ್ 49 ರನ್ ಗಳಿಸಿದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.