ಶನಿವಾರ, ಏಪ್ರಿಲ್ 1, 2023
31 °C

ಜನಾಂಗೀಯ ನಿಂದನೆ ಆರೋಪ ತಳ್ಳಿ ಹಾಕಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಂಡನ್‌: ಯಾರ್ಕ್‌ಶೈರ್‌ ಕೌಂಟಿ ತಂಡದ ಮಾಜಿ ಆಟಗಾರ ಅಜೀಮ್ ರಫೀಕ್ ಮಾಡಿರುವ ಜನಾಂಗೀಯ ನಿಂದನೆ ಆರೋಪವನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ನಿರಾಕರಿಸಿದ್ದಾರೆ. 

ಅಜೀಮ್ ರಫೀಕ್ ಜನಾಂಗೀಯ ಆರೋಪವನ್ನು ಸ್ವತಃ ಮೈಕಲ್ ವಾನ್ ಅವರೇ ಬಹಿರಂಗಪಡಿಸಿದ್ದು, ಸತ್ಯ ಸಾಬೀತು ಮಾಡುವ ವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. 

ಇದನ್ನೂ ಓದಿ: 

'ಡೈಲಿ ಟೆಲಿಗ್ರಾಫ್' ಅಂಕಣದಲ್ಲಿ ಜನಾಂಗೀಯ ನಿಂದನೆ ವಿವಾದದ ಕುರಿತು ಮೈಕಲ್ ವಾನ್ ವಿವರಣೆ ನೀಡಿದ್ದಾರೆ. 

2009ರಲ್ಲಿ ಯಾರ್ಕ್‌ಶೈರ್ ತಂಡದ ಪರ ಆಡುತ್ತಿದ್ದಾಗ ಅಜೀಮ್ ರಫೀಕ್ ಸೇರಿದಂತೆ ಏಷ್ಯಾದ ಆಟಗಾರರ ವಿರುದ್ಧ ವಾನ್ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂಬ ಆರೋಪ ದಾಖಲಾಗಿದೆ. 

'ನನ್ನ ವಿರುದ್ಧ ಮಾಡಿರುವ ಆರೋಪವನ್ನು ನಾನು ನಿರಾಕರಿಸುತ್ತೇನೆ. ನನಗೆ ಮುಚ್ಚಿಡಲು ಏನೂ ಇಲ್ಲ. ಆಟಗಾರರನ್ನು ನಿಂದಿಸುವ ಯಾವುದೇ ಪದ ನಾನು ಬಳಕೆ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಅಲ್ಲದೆ ಸತ್ಯವನ್ನು ಸಾಬೀತುಪಡಿಸಲು ಕೊನೆಯ ವರೆಗೂ ಹೋರಾಡುತ್ತೇನೆ' ಎಂದು ಹೇಳಿದ್ದಾರೆ. 

ಅಜೀಮ್ ರಫೀಕ್ ಮಾಡಿರುವ ಜನಾಂಗೀಯ ನಿಂದನೆ ಆರೋಪದ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಂತೆ ಯಾರ್ಕ್‌ಶೈರ್ ಕೌಂಟಿ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನಿರ್ಬಂಧ ವಿಧಿಸಿದೆ. ಈ ಸಂಬಂಧ ಯಾರ್ಕ್‌ಶೈರ್ ಆಟಗಾರ ಗ್ಯಾರಿ ಬ್ಯಾಲೆನ್ಸ್ ಅವರನ್ನು ಇಂಗ್ಲೆಂಡ್ ಆಯ್ಕೆಯಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು