ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"50-50" ಸಂದರ್ಭದಲ್ಲಿ ಥರ್ಡ್ ಅಂಪೈರ್ ಸರಿಯಾಗಿ ಪರಿಶೀಲಿಸಲಿಲ್ಲ: ಜ್ಯಾಕ್ ಕ್ರಾಲಿ

Last Updated 25 ಫೆಬ್ರುವರಿ 2021, 5:40 IST
ಅಕ್ಷರ ಗಾತ್ರ

ಅಹಮದಾಬಾದ್: ಭಾರತ ವಿರುದ್ಧದ ಮೂರನೇ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ನಮ್ಮ ತಂಡದಿಂದ ಬಂದ ಕೆಲವು "50-50" ಮನವಿಗಳನ್ನು ಥರ್ಡ್ ಅಂಪೈರ್ ಸಂಪೂರ್ಣವಾಗಿ ಪರಿಶೀಲಿಸಲಿಲ್ಲ. ಇದು ನಮ್ಮ ತಂಡವನ್ನು ನಿರಾಶೆಗೊಳಿಸಿದೆ ಎಂದು ಇಂಗ್ಲೆಂಡ್ ಆರಂಭಿಕ ಆಟಗಾರ ಜ್ಯಾಕ್ ಕ್ರಾಲಿ ಹೇಳಿದ್ದಾರೆ.

ಟಿವಿ ಅಂಪೈರ್ ಸಿ ಶಂಶುದ್ದೀನ್ ತೀರ್ಪಿನ ಕುರಿತಂತೆ ಕ್ರಾಲಿ ಅಸಮಾಧಾನ ಹೊರ ಹಾಕಿದ್ದಾರೆ. ಓಪನರ್ ಶುಭಮನ್ ಗಿಲ್ ಅವರ ಔಟ್ ಎಂದು ತೀರ್ಪಿತ್ತಿದ್ದ ಮೈದಾನದ ಅಂಪೈರ್ ತೀರ್ಪನ್ನು ಹಲವು ಬಾರಿ ರೀಪ್ಲೆ ಮೂಲಕ ಪರಿಶೀಲನೆ ಬಳಿಕ ಹಿಂಪಡೆಯಲು ಟಿವಿ ಅಂಪೈರ್ ಸೂಚಿಸಿದ್ದರು. ಜ್ಯಾಕ್ ಲೀಚ್ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಅವರ ನಿಕಟ ಸ್ಟಂಪಿಂಗ್ ಮನವಿಯನ್ನು ನೌಟೌಟ್ ಎಂದು ಘೋಷಿಸಿದ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.

"ಇದು ತುಂಬಾ ನಿರಾಶಾದಾಯಕವಾಗಿದೆ, ಆಟದಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಈ ಸಂದರ್ಭ 50-50 ಸನ್ನಿವೇಶಗಳಲ್ಲಿ ನಮ್ಮ ಪರವಾದ ತೀರ್ಪನ್ನು ನಾವು ನಿರೀಕ್ಷಿಸಿದ್ದೆವು. ಅದು ಕೆಲವೊಮ್ಮೆ ಸಾಧ್ಯವಾಗುತ್ತದೆ. ನಿನ್ನೆ ದಿನ ಖಂಡಿತವಾಗಿಯೂ ನಮ್ಮ ದಿನವಲ್ಲ. ನಮ್ಮ ಅವಕಾಶಗಳು ನಮಗೆ ನೆರವಾಗಲಿಲ್ಲ" ಎಂದು ಕ್ರಾಲಿ ಹೇಳಿದರು.

"ನಾವು ಬ್ಯಾಟಿಂಗ್ ಮಾಡುವಾಗ, ಅವರು ಐದು ಅಥವಾ ಆರು ವಿಭಿನ್ನ ಕೋನಗಳಿಂದ ತೀರ್ಪನ್ನು ಪರಿಶೀಲಿಸಿದಂತೆ ತೋರುತ್ತಿದೆ. ನಾವು ಫೀಲ್ಡಿಂಗ್ ಮಾಡುವಾಗ ಒಂದು ಕೋನದಿಂದ ಮಾತ್ರ ನೋಡಿದಂತೆ ಕಾಣುತ್ತದೆ. ," ಎಂದು ಹೇಳಿದ್ದಾರೆ.

"ಅವರು ಔಟ್ ಆಗಿದ್ದಾರೋ ಇಲ್ಲವೋ ಎಂದು ನಾನು ಹೇಳಲಾರೆ, ಆದರೆ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸದೆ ಇದ್ದಾಗ ಹತಾಶೆ ಮೂಡುತ್ತದೆ ಎಂದು ನಾನು ಭಾವಿಸುತ್ತೇನೆ." ಎಂದು ಕ್ರಾಲಿ ಹೇಳುತ್ತಾರೆ.

ಮರು ಪರಿಶೀಲನೆ ಬಳಿಕ ನಾಯಕ ಜೋ ರೂಟ್ ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ಅನಿಲ್ ಚೌಧರಿ ಅವರೊಂದಿಗೆ ಮಾತನಾಡಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಾಕ್, "ನಾನು ಉತ್ತರಿಸಲು ಬಯಸುತ್ತೇನೆ. ಆದರೆ, ನಾನು ಅದನ್ನು ನಾಯಕ ಮತ್ತು ಹಿರಿಯ ಆಟಗಾರರಿಗೆ ಬಿಡುತ್ತೇನೆ" ಎಂದು ಹೇಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತದ ಸ್ಪಿನ್‌ ದಾಳಿಗೆ ತುತ್ತಾಗಿ ಎರಡು ಸೆಷನ್‌ಗಳು ಮುಗಿಯುವುದಕ್ಕೂ ಮುನ್ನವೇ 112 ರನ್‌ಗಳಿಗೆ ಆಲೌಟ್ ಆಯಿತು.

ಎಡಗೈ ಸ್ಪಿನ್ನರ್ ಆಕ್ಷರ್ ಪಟೇಲ್ ತಮ್ಮ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಎರಡನೇ ಐದು ವಿಕೆಟ್ ದಾಖಲೆ ಮೂಲಕ 38 ರನ್‌ಗೆ 6 ವಿಕೆಟ್ ಉರುಳಿಸಿದರು. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಭಾರತ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿತ್ತು. ಅಂತಿಮ ಅವಧಿಯಲ್ಲಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಬಿದ್ದಿದ್ದು, ತಂಡಕ್ಕೆ ದುಬಾರಿಯಾಗಿದೆ.

ಅರ್ಧಶತಕ ದಾಖಲಿಸಿರುವ ರೋಹಿತ್ ಶರ್ಮಾ(57), ಅಜಿಂಕ್ಯ ರಹಾನೆ(1) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT