ನವದೆಹಲಿ: ಭಾರತವು 2011ರಲ್ಲಿ ಸಾಧಿಸಿದ್ದ ವಿಶ್ವಕಪ್ ವಿಜಯವು ಸಾಧ್ಯವಾಗಿದ್ದು ತಂಡದ ಎಲ್ಲ ಆಟಗಾರರು, ನೆರವು ಸಿಬ್ಬಂದಿಯಿಂದ. ಜಯದ ಕುರಿತು ಇರುವ ಭ್ರಮೆಯನ್ನು ಸಿಕ್ಸರ್ಗೆ ಎತ್ತುವ ಸಮಯ ಇದು ಎಂದು ಹಿರಿಯ ಆಟಗಾರ ಮತ್ತು ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ನಲ್ಲಿ ಭಾರತವು ಗೆದ್ದಿತ್ತು. ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರು ವಿಜಯದ ಸಿಕ್ಸರ್ ಹೊಡೆದಿದ್ದು. ಆ ಐತಿಹಾಸಿಕ ಕ್ಷಣದ ವಿಡಿಯೊ ತುಣುಕನ್ನು ಕೆಲವು ವೆಬ್ಸೈಟ್ಗಳು ಗುರುವಾರ ಪ್ರಕಟಿಸಿವೆ. ಆ ಸಿಕ್ಸರ್ ಭಾರತದ ಕನಸನ್ನು ನನಸು ಮಾಡಿತು ಎಂದು ಬರೆದಿದ್ದವು.

ಆ ವೆಬ್ಸೈಟ್ಗಳ ತುಣುಕುಗಳನ್ನು ಕೂಡ ಗಂಭೀರ್ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಆ ಫೈನಲ್ನಲ್ಲಿ ಗಂಭೀರ್ 97 ರನ್ ಬಾರಿಸಿದ್ದರು. ಅಜೇಯ 91 ರನ್ ಗಳಿಸಿದ್ದ ಧೋನಿ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು.

ಇದನ್ನೂ ಓದಿ:ಭಾರತಕ್ಕೆ 2ನೇ ಸಲ ವಿಶ್ವಕಪ್ ಗೆದ್ದುಕೊಟ್ಟಿದ್ಯಾರು? ಇದು ಬಿಸಿಸಿಐಗೆ ಗೊತ್ತಿಲ್ಲ!

ಗೌತಮ್ ದೇಣಿಗೆ: ಗೌತಮ್ ಗಂಭೀರ್ ಅವರು ಕೋವಿಡ್ನಿಂದ ಬಳಲುತ್ತಿರುವವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಅವರು, ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.