ಗುವಾಹಟಿ (ಪಿಟಿಐ): ಇದೇ ಮೊದಲ ಬಾರಿ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಗುವಾಹಟಿ ಸಜ್ಜಾಗಿದೆ.
ಐಪಿಎಲ್‌ನ ಎರಡು ಪಂದ್ಯಗಳು ಇಲ್ಲಿನ ಅಸ್ಸಾಂ ಕ್ರಿಕೆಟ್ ಸಂಸ್ಥೆ (ಎಸಿಎ) ಕ್ರೀಡಾಂಗಣದಲ್ಲಿ ನಡೆಯಲಿವೆ. ರಾಜಸ್ತಾನ ರಾಯಲ್ಸ್ ತಂಡ ತನ್ನ ಎರಡು ‘ಹೋಂ’ ಪಂದ್ಯಗಳನ್ನು ಇಲ್ಲಿ ಆಡಲಿದ್ದು, ಏ.5 ರಂದು ಪಂಜಾಬ್ ಕಿಂಗ್ಸ್ ಹಾಗೂ ಏ.8 ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಎದುರಿಸಲಿದೆ.
‘2020 ರಲ್ಲಿ ರಾಜಸ್ತಾನ ತಂಡದ ಎರಡು ಪಂದ್ಯಗಳ ಆತಿಥ್ಯದ ಅವಕಾಶವನ್ನು ನಮಗೆ ನೀಡಲಾಗಿತ್ತು. ಆದರೆ ಕೋವಿಡ್ ಕಾರಣ ಆ ವರ್ಷ ಪಂದ್ಯ ನಡೆಯಲಿಲ್ಲ. ಈ ಬಾರಿ ಎರಡು ಪಂದ್ಯಗಳು ಆಯೋಜಿಸುತ್ತಿರುವುದು ಸಂತಸದ ವಿಷಯ’ ಎಂದು ಎಸಿಎ ಕಾರ್ಯದರ್ಶಿ ತ್ರಿದಿಬ್ ಕೊನ್ವರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.