ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಬಿಟ್ಟು ವಿಶ್ವಕಪ್, ಆ್ಯಷಸ್‌ ಆಯ್ಕೆ ಮಾಡಿಕೊಂಡೆ: ಕ್ರಿಸ್ ವೋಕ್ಸ್

Last Updated 14 ಸೆಪ್ಟೆಂಬರ್ 2021, 12:22 IST
ಅಕ್ಷರ ಗಾತ್ರ

ಲಂಡನ್‌: ಸತತ ಮೂರು ಟೂರ್ನಿಗಳಲ್ಲಿ ಆಡುವುದು ಅತ್ಯಂತ ಕಷ್ಟಕರ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಬಿಟ್ಟು ಟಿ–20 ವಿಶ್ವಕಪ್ ಮತ್ತು ಆ್ಯಷಸ್‌ ಸರಣಿಯನ್ನು ಆಯ್ಕೆ ಮಾಡಿದೆ ಎಂದು ಇಂಗ್ಲೆಂಡ್‌ ತಂಡದ ವೇಗದ ಬೌಲರ್ ಕ್ರಿಸ್ ವೋಕ್ಸ್ ಹೇಳಿದ್ದಾರೆ.

ಐಪಿಎಲ್‌ನಲ್ಲಿವೋಕ್ಸ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರನಾಗಿದ್ದಾರೆ. ಇಂಗ್ಲೆಂಡ್‌ನ ಜಾನಿ ಬೇಸ್ಟೊ (ಸನ್ ರೈಸರ್ಸ್ ಹೈದರಾಬಾದ್) ಮತ್ತು ಡೇವಿಡ್ ಮಲಾನ್‌ (ಪಂಜಾಬ್ ಕಿಂಗ್ಸ್) ಕೂಡ ಈ ಬಾರಿಯ ಟೂರ್ನಿಯಲ್ಲಿ ಆಡುವುದಿಲ್ಲ ಎಂದಿದ್ದಾರೆ.

‘ನಾನು ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗುತ್ತೇನೆ ಎಂದು ತಿಳಿದಿರಲಿಲ್ಲ. ಐಪಿಎಲ್‌ಅನ್ನು ಇದೇ ಬೇಸಿಗೆಯ ಅಂತ್ಯಕ್ಕೆ ಮರುನಿಗದಿ ಮಾಡಲಾಗಿದೆ. ವಿಶ್ವಕಪ್‌, ಆ್ಯಷಸ್ ಸರಣಿ ಮತ್ತು ಐಪಿಎಲ್‌ ಟೂರ್ನಿಗಳ ಮಧ್ಯೆ ತುಂಬಾ ಕಡಿಮೆ ಸಮಯ ಇದೆ. ಐಪಿಎಲ್‌ ಭಾಗವಾಗುವುದಕ್ಕೆ ಇಷ್ಟವಿತ್ತು. ಆದರೆ ಯಾವುದಾದರೊಂದನ್ನು ಬಿಟ್ಟುಕೊಡಲೇಬೇಕಿತ್ತು‘ ಎಂದು ವೋಕ್ಸ್ ಹೇಳಿದ್ದಾಗಿ ‘ದ ಗಾರ್ಡಿಯನ್‘ ವರದಿ ಮಾಡಿದೆ.

ಐಪಿಎಲ್‌ ಮುಕ್ತಾಯದ ಬಳಿಕ ಯುಎಇ ಮತ್ತು ಒಮನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆ್ಯಷಸ್ ಸರಣಿ ಕೂಡ ಅಷ್ಟೇ ಮಹತ್ವದ್ದಾಗಿದೆ ಎಂದು ವೋಕ್ಸ್ ಹೇಳಿದ್ದಾರೆ.

ಕೋವಿಡ್‌ನ ಕಟ್ಟುನಿಟ್ಟಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ಹಲವು ಆಟಗಾರರು ಆ್ಯಷಸ್‌ ಸರಣಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾಕ್ಕೆ ತೆರಳಲು ವೋಕ್ಸ್ ಬಹಳ ಉತ್ಸುಕರಾಗಿದ್ದಾರೆ.

ಇಂಗ್ಲೆಂಡ್‌ ಆಟಗಾರರಿಗೆ ತಮ್ಮ ಕುಟುಂಬದೊಂದಿಗೆ ತೆರಳಲು ಆಸ್ಟ್ರೇಲಿಯಾ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT