ಬುಧವಾರ, ಆಗಸ್ಟ್ 10, 2022
23 °C

ಇಂಗ್ಲೆಂಡ್ ವಿರುದ್ಧದ ಪಂದ್ಯ: ಹರ್ಲಿನ್ ಡಿಯೊಲ್‌ರ ಕ್ಯಾಚ್‌ಗೆ ಟ್ವೀಟಿಗರು ಫಿದಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭಾರತದ ಮಹಿಳಾ ಕ್ರಿಕೆಟ್ ತಂಡದ ಫೀಲ್ಡರ್ ಹರ್ಲಿನ್ ಡಿಯೊಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಹಗ್ಗದ ಸಮೀಪ ಹಿಡಿದ ಕ್ಯಾಚ್ ಇದೀಗ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.

ನಾರ್ಥಾಂಪ್ಟನ್‌ನಲ್ಲಿ ಆತಿಥೇಯರ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ಈ ಕ್ಷಣ ಕಂಡುಬಂತು. ಮೊದಲ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಡಿಯೋಲ್, ಚೆಂಡನ್ನು ಕ್ಯಾಚ್ ಹಿಡಿದು, ಇನ್ನೇನು ಬೌಂಡರಿ ಗೆರೆ ದಾಟಬೇಕೆನ್ನುವಷ್ಟರಲ್ಲಿ ಚೆಂಡನ್ನು ಮತ್ತೆ ಬೌಂಡರಿಯೊಳಗೆ ಮೇಲಕ್ಕೆಸೆದರು. ಬಳಿಕ ಅದ್ಭುತ ಸಮತೋಲನ ಕಾಪಾಡಿಕೊಳ್ಳುವ ಮೂಲಕ ಡೈವ್ ಹೊಡೆದು ಮತ್ತೆ ಬೌಂಡರಿಯೊಳಗೆ ಕ್ಯಾಚ್ ಹಿಡಿದರು. ಪರಿಣಾಮ ಬ್ಯಾಟ್ ಮಾಡುತ್ತಿದ್ದ ಎಮಿ ಎಲೆನ್ ಜೋನ್ಸ್ ಅವರು 27 ಎಸೆತಗಳಲ್ಲಿ 43 ರನ್ ಗಳಿಸಿ ಔಟಾಗಿ ಪೆವಿಲಿಯನ್‌ಗೆ ಮರಳಿದರು.

ಡಿಯೋಲ್ ಅವರ ಮಿಂಚಿನ ಫೀಲ್ಡಿಂಗ್ ಮತ್ತು ಅದ್ಭುತ ಕ್ಯಾಚ್‌‌ಗೆ ಫಿದಾ ಆದ ಟ್ವೀಟಿಗರು ಅಚ್ಚರಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕ್ಯಾಚ್‌ನ ಅನೇಕ ವಿಡಿಯೊಗಳು ಮತ್ತು ರೆಕಾರ್ಡಿಂಗ್‌ಗಳು ಟ್ವಿಟರ್ ತುಂಬಿ ಹೋದವು. ಡಿಯೊಲ್‌ರ ಆ ಕ್ಯಾಚ್‌ ಎಷ್ಟು ಸೊಗಸಾಗಿತ್ತೆಂದರೆ ವಿ.ವಿ.ಎಸ್. ಲಕ್ಷ್ಮಣ್ ಮತ್ತು ಲಿಸಾ ಸ್ಥಲೇಕರ್ ಅವರೂ ಇಷ್ಟಪಡುವಂತೆ ಮಾಡಿತು.

ಟ್ವಿಟರ್‌ನಿಂದ ಕೆಲವು ಅತ್ಯುತ್ತಮ ಪ್ರತಿಕ್ರಿಯೆಗಳು ಇಲ್ಲಿವೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು