ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ | ಗಾರ್ಡನರ್‌ಗೆ ಮೂರು ವಿಕೆಟ್, ಮುಂಬೈಗೆ ಸತತ ಐದನೇ ಜಯ

Last Updated 14 ಮಾರ್ಚ್ 2023, 19:05 IST
ಅಕ್ಷರ ಗಾತ್ರ

ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ (51) ಅವರ ಚೆಂದದ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಐದನೇ ಗೆಲುವು ಸಾಧಿಸಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ 55 ರನ್‌ಗಳಿಂದ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್‌ ಗಳಿಸಿದರೆ, ಜೈಂಟ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 107 ರನ್‌ ಮಾತ್ರ ಗಳಿಸಿತು. ನಥಾಲಿ ಸಿವೆರ್‌ ಬ್ರಂಟ್‌ (21ಕ್ಕೆ 3) ಮತ್ತು ಹೆಯಲಿ ಮ್ಯಾಥ್ಯೂಸ್‌ (23ಕ್ಕೆ 3) ಅವರ ಚುರುಕಿನ ದಾಳಿಗೆ ಜೈಂಟ್ಸ್‌ ಬ್ಯಾಟರ್‌ಗಳು ದಂಗಾದರು.

ಆಡಿದ ಎಲ್ಲ ಐದು ಪಂದ್ಯಗಳನ್ನು ಗೆದ್ದುಕೊಂಡ ಮುಂಬೈ ತಂಡ 10 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.

ಹರ್ಮನ್‌ ಮಿಂಚು: ಮುಂಬೈ ತಂಡ ಹೆಯಲಿ ಮ್ಯಾಥ್ಯೂಸ್ ಅವರನ್ನು ಬೇಗನೇ ಕಳೆದುಕೊಂಡಿತು. ಇನ್ನೊಂದು ಬದಿಯಲ್ಲಿದ್ದ ಯಷ್ಟಿಕಾ ಭಾಟಿಯಾ ಅವರೊಂದಿಗೆ ಸೇರಿಕೊಂಡ ನಥಾಲಿ ಸಿವೆರ್‌ ಬ್ರಂಟ್‌ ಎರಡನೇ ವಿಕೆಟ್ ಜೊತೆಯಾಟದಲ್ಲಿ 74 ರನ್‌ ಸೇರಿಸಿದರು. 11ನೇ ಓವರ್‌ನಲ್ಲಿ ಕಿಮ್ ಗಾರ್ಥ್ ಬೌಲಿಂಗ್‌ನಲ್ಲಿ ಬ್ರಂಟ್ (36; 31ಎ, 4X5., 6X1) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರೊಂದಿಗೆ ಜೊತೆಯಾಟವೂ ಮುರಿಯಿತು.

ಹರ್ಮನ್‌ಪ್ರೀತ್ ಬೌಲರ್‌ಗಳನ್ನು ದಂಡಿಸಿದರು. 170ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. 30 ಎಸೆತಗಳಲ್ಲಿ 51 ರನ್ ಗಳಿಸಿದ ಅವರು ತಂಡದ ಮೊತ್ತವನ್ನು ಹೆಚ್ಚಿಸಿದರು. ಅವರ ಬ್ಯಾಟ್‌ನಿಂದ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ದಾಖಲಾದವು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹರ್ಮನ್‌ಪ್ರೀತ್ ವಿಕೆಟ್ ಗಳಿಸಿದ ಆ್ಯಷ್ಲಿ ಗಾರ್ಡನರ್ ಸಂಭ್ರಮಿಸಿದರು. ಅಮೆಲಿಯಾ ಕೆರ್ (19; 13ಎ) ಬಿಟ್ಟರೆ ತಂಡದ ಉಳಿದ ಬ್ಯಾಟರ್‌ಗಳು ಹೆಚ್ಚು ರನ್‌ ಗಳಿಸಲಿಲ್ಲ.

ಸಂಕ್ಷಿಪ್ತ ಸ್ಕೋರು
ಮುಂಬೈ ಇಂಡಿಯನ್ಸ್:
20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 (ಯಷ್ಟಿಕಾ ಭಾಟಿಯಾ 44, ನಥಾಲಿ ಸ್ಕಿವರ್ ಬ್ರಂಟ್ 36, ಹರ್ಮನ್‌ಪ್ರೀತ್ ಕೌರ್ 51, ಅಮೆಲಿಯಾ ಕೆರ್ 19, ಆ್ಯಷ್ಲಿ ಗಾರ್ಡನರ್ 34ಕ್ಕೆ3)

ಗುಜರಾತ್‌ ಜೈಂಟ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 107 (ಹರ್ಲೀನ್‌ ಡಿಯೊಲ್‌ 22, ಸ್ನೇಹಾ ರಾಣಾ 20, ನಥಾಲಿ ಸಿವೆರ್‌ ಬ್ರಂಟ್‌ 21ಕ್ಕೆ 3, ಹೆಯಲಿ ಮ್ಯಾಥ್ಯೂಸ್‌ 23ಕ್ಕೆ 3, ಅಮೇಲಿ ಕೆರ್‌ 18ಕ್ಕೆ 2) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 55 ರನ್‌ ಗೆಲುವು

ಇಂದಿನ ಪಂದ್ಯ: ಆರ್‌ಸಿಬಿ– ಯುಪಿ ವಾರಿಯರ್ಸ್‌

ಆರಂಭ: ರಾತ್ರಿ 7.30

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 (ಯಷ್ಟಿಕಾ ಭಾಟಿಯಾ 44, ನಥಾಲಿ ಸ್ಕಿವರ್ ಬ್ರಂಟ್ 36, ಹರ್ಮನ್‌ಪ್ರೀತ್ ಕೌರ್ 51, ಅಮೆಲಿಯಾ ಕೆರ್ 19, ಆ್ಯಷ್ಲಿ ಗಾರ್ಡನರ್ 34ಕ್ಕೆ3)

ಗುಜರಾತ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 107 (ಹರ್ಲೀನ್‌ ಡಿಯೊಲ್‌ 22, ಸ್ನೇಹಾ ರಾಣಾ 20, ನಥಾಲಿ ಸಿವೆರ್‌ ಬ್ರಂಟ್‌ 21ಕ್ಕೆ 3, ಹೆಯಲಿ ಮ್ಯಾಥ್ಯೂಸ್‌ 23ಕ್ಕೆ 3, ಅಮೇಲಿ ಕೆರ್‌ 18ಕ್ಕೆ 2) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 55 ರನ್‌ ಗೆಲುವು

ಇಂದಿನ ಪಂದ್ಯ: ಆರ್‌ಸಿಬಿ– ಯುಪಿ ವಾರಿಯರ್ಸ್‌
ಆರಂಭ: ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT