ಶುಕ್ರವಾರ, ಆಗಸ್ಟ್ 23, 2019
21 °C

ಆಮ್ಲಾ ವಿದಾಯ

Published:
Updated:
Prajavani

ಜೋಹಾನ್ಸ್‌ಬರ್ಗ್ (ಎಎಫ್‌ಪಿ): ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಗುರುವಾರ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೂ ವಿದಾಯ ಹೇಳಿದರು.

36 ವರ್ಷದ ಆಮ್ಲಾ ಆರಂಭಿಕ ಬ್ಯಾಟ್ಸ್‌ಮನ್  ಆಗಿದ್ದಾರೆ. ಅವರ ಖಾತೆ ಯಲ್ಲಿ ಒಟ್ಟು 55 ಶತಕಗಳು ಇವೆ. 2012ರಲ್ಲಿ ದ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಅವರು ತ್ರಿಶತಕ (311) ಬಾರಿಸಿದ್ದರು. ಬಲಗೈ ಬ್ಯಾಟ್ಸ್‌ಮನ್ ಆಮ್ಲಾ 124 ಟೆಸ್ಟ್‌ಗಳಲ್ಲಿ 9282 ರನ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ  ಒಟ್ಟು ನಾಲ್ಕು ದ್ವಿಶತಕಗಳನ್ನು ಹೊಡೆದಿದ್ದಾರೆ. 181 ಏಕದಿನ ಪಂದ್ಯ ಗಳಲ್ಲಿ 8113 ರನ್‌ ಪೇರಿಸಿದ್ದಾರೆ.

ಮೂರು ದಿನಗಳ ಹಿಂದೆ ವೇಗಿ ಡೇಲ್ ಸ್ಟೇಯ್ನ್ ವಿದಾಯ ಘೋಷಿಸಿದ್ದರು. ಇದೀಗ ತಂಡದ ಮತ್ತೊಬ್ಬ ಹಿರಿಯ ಆಟಗಾರ ನಿವೃತ್ತಿಯಾಗಿದ್ದಾರೆ. 

Post Comments (+)