ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ವಜಾ ಆಗಿರುವ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ₹ 538 ಕೋಟಿ ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದೆ.

ಇದೇ ಪ್ರಕರಣದ ಕುರಿತು ನ್ಯಾಯಾಲಯ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಬಿಸಿಸಿಐ ಮೇಲ್ಮನವಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಚಾಗ್ಲಾ ತೀರ್ಪು ಪ್ರಕಟಿಸಿದರು.

2011ರ ಐಪಿಎಲ್ನಲ್ಲಿ ಕೊಚ್ಚಿ ಟಸ್ಕರ್ಸ್ ತಂಡವು ಆಡಿತ್ತು. ಈ ತಂಡವು ಕೇರಳ ಮೂಲದ ಫ್ರ್ಯಾಂಚೈಸಿಯಾಗಿತ್ತು. ರೆಂಡ್ಜೆವಿಒಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್ಎಸ್ಡಬ್ಲ್ಯು) ಮತ್ತು ನಂತರ ಕೊಚ್ಚಿ ಕ್ರಿಕೆಟ್ ಪ್ರೈವೆಟ್ ಲಿಮಿಟೆಡ್ (ಕೆಸಿಪಿಎಲ್) ಮಾಲೀಕತ್ವ ವಹಿಸಿದ್ದವು.

ಫ್ರ್ಯಾಂಚೈಸಿಯು ನೀಡಿರುವ ಬ್ಯಾಂಕ್ ಗ್ಯಾರಂಟಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಬಿಸಿಸಿಐ 2012ರಲ್ಲಿ ತಂಡವನ್ನು ಟೂರ್ನಿಯಿಂದ ವಜಾಗೊಳಿಸಿತ್ತು. ಫ್ರ್ಯಾಂಚೈಸಿಯು ಕೋರ್ಟ್ ಮೆಟ್ಟಿಲೇರಿತ್ತು.

ಕೆಲವು ವರ್ಷಗಳ ನಂತರ ಕೆಸಿಪಿಎಲ್ಗೆ ₹384.83 ಕೋಟಿ ಮತ್ತು ಈ ಮೊತ್ತಕ್ಕೆ ಶೇ 18ರಷ್ಟು ಬಡ್ಡಿಯನ್ನು 2011ರಿಂದ ಲೆಕ್ಕಹಾಕಿ ನೀಡಬೇಕು ಎಂದು ಬಿಸಿಸಿಐಗೆ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.