ಗುರುವಾರ , ಆಗಸ್ಟ್ 11, 2022
21 °C
ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ವಿಂಡೀಸ್‌ಗೆ ಬೇಕಿದೆ 85 ರನ್‌

ಟೆಸ್ಟ್‌ ಕ್ರಿಕೆಟ್‌: ಜೇಸನ್‌ ಹೋಲ್ಡರ್‌ ಹೋರಾಟ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವೆಲಿಂಗ್ಟನ್‌: ನ್ಯೂಜಿಲೆಂಡ್‌ ಬೌಲರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ವೆಸ್ಡ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅರ್ಧ ಶತಕವನ್ನು ಬಾರಿಸಿದರು.

ಎರಡನೇ ಟೆಸ್ಟ್‌ನ ಮೂರನೇ ದಿನವಾದ ಭಾನುವಾರವೇ ಅತಿಥೇಯ ತಂಡದ ಗೆಲುವಿನ ದಾರಿಗೆ ಅವರು ತಡೆಗೋಡೆಯಾದರು. ಮಂದ ಬೆಳಕಿನಿಂದ ದಿನದಾಟ ಒಂದು ಗಂಟೆ ಮೊದಲೇ ಕೊನೆಗೊಂಡಾಗ ವೆಸ್ಟ್ ಇಂಡೀಸ್‌ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 244 ರನ್‌ ಗಳಿಸಿತು. ಸರಣಿಯಲ್ಲಿ ಸತತ ಎರಡನೇ ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಬೇಕಾದರೆ ಕೆರಿಬಿಯನ್‌ ತಂಡ ಉಳಿದ ನಾಲ್ಕು ವಿಕೆಟ್‌ಗಳಿಂದ ಇನ್ನೂ 85 ರನ್‌ ಗಳಿಸಬೇಕಾಗಿದೆ.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌: 460; ವೆಸ್ಟ್‌ ಇಂಡೀಸ್‌: ಮೊದಲ ಇನಿಂಗ್ಸ್‌: 131 ಮತ್ತು 2ನೇ ಇನಿಂಗ್ಸ್‌: 6 ವಿಕೆಟ್‌ಗೆ 244 (ಕ್ಯಾಂಪ್‌ಬೆಲ್‌ 68, ಬ್ರೂಕ್ಸ್‌ 34, ಜೇಸನ್ ಹೋಲ್ಡರ್‌ ಬ್ಯಾಟಿಂಗ್‌ 60, ಜೋಶುವಾ ಡಿಸಿಲ್ವ ಬ್ಯಾಟಿಂಗ್‌ 25; ಬೌಲ್ಟ್‌ 75ಕ್ಕೆ3, ಜೇಮಿಸನ್‌ 43ಕ್ಕೆ2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು