ಬುಧವಾರ, ಅಕ್ಟೋಬರ್ 20, 2021
24 °C

ಪಾಕಿಸ್ತಾನಕ್ಕೆ ಹೋಗುವುದಾಗಿ ಗೇಲ್ ಟ್ವೀಟ್; ಗೊಂದಲದಲ್ಲಿ ಅಭಿಮಾನಿಗಳು!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದುಬೈ: ಭದ್ರತಾ ಕಾರಣಗಳನ್ನು ಒಡ್ಡಿರುವ ನ್ಯೂಜಿಲೆಂಡ್, ಪಾಕಿಸ್ತಾನ ಪ್ರವಾಸವನ್ನು ಏಕಾಏಕಿ ಮೊಟಕುಗೊಳಿಸಿ ತವರಿಗೆ ಮರಳಿದೆ. ಕೊನೆಯ ಕ್ಷಣದಲ್ಲಿ ನ್ಯೂಜಿಲೆಂಡ್ ತಂಡವು ಪ್ರವಾಸವನ್ನು ಮೊಟಕುಗೊಳಿಸಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಏತನ್ಮಧ್ಯೆ ವೆಸ್ಟ್‌ಇಂಡೀಸ್‌ನ ಸ್ಟಾರ್ ಆಟಗಾರ ಕ್ರಿಸ್ ಗೇಲ್ ತಾವು ಪಾಕಿಸ್ತಾನಕ್ಕೆ ಹೋಗುವುದಾಗಿ ಟ್ವೀಟ್ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 

 

 

 

'ನಾನು ನಾಳೆ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ಯಾರೆಲ್ಲ ಬರುತ್ತೀರಿ?' ಎಂದು ಟ್ವೀಟ್ ಮಾಡಿದ್ದಾರೆ.

 

ಗೇಲ್ ಟ್ಟೀಟ್ ಅನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಹಂಚಿದೆ. ಈ ನಡುವೆ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಗೇಲ್ ಟ್ವೀಟ್ ಕೊನೆಗೆ ಕಣ್ಸನ್ನೆ ಮಾಡುವ ಇಮೋಜಿ ಸಹ ಹಂಚಿದ್ದಾರೆ.

ಅಂದ ಹಾಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಪಂಜಾಬ್ ಕಿಂಗ್ಸ್ ತಂಡವನ್ನು ಗೇಲ್ ಪ್ರತಿನಿಧಿಸುತ್ತಾರೆ.

 

 

 

 

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು