ದುಬೈ: ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮ ಆಟಗಾರನನ್ನು ನಾನು ಕಂಡಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. 50 ಓವರ್ಗಳ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟಿಂಗ್ ಸ್ಟಾರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ.

ಭಾನುವಾರ ಇಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಆರು ವಿಕೆಟ್ಗಳ ಜಯ ಸಾಧಿಸಿತು. ಕೊಹ್ಲಿ ಸಿಡಿಸಿದ ಅಜೇಯ 100 ರನ್ ಗೆಲುವಿಗೆ ಕಾರಣವಾಯಿತು. ಇದು ಏಕದಿನ ಕ್ರಿಕೆಟ್ನಲ್ಲಿ ಅವರು ಗಳಿಸಿದ 51ನೇ ಶತಕವಾಗಿತ್ತು.

‘ನಾನು ವಿರಾಟ್ ಕೊಹ್ಲಿಗಿಂತ ಉತ್ತಮ ಏಕದಿನ ಕ್ರಿಕೆಟ್ ಆಟಗಾರನನ್ನು ನೋಡಿಲ್ಲ. ಈಗ ಅವರು ನನ್ನ ದಾಖಲೆಯನ್ನು ಮೀರಿ ಮುಂದೆ ಹೋಗಿದ್ದಾರೆ. ವಿಶ್ವದಲ್ಲಿ ಅತ್ಯಧಿಕ ರನ್ ಗಳಿಸಿರುವವರ ಪಟ್ಟಿಯಲ್ಲಿ ಅವರಿಗಿಂತ ಇಬ್ಬರು ಮಾತ್ರ ಮುಂದಿದ್ದಾರೆ. ಸಾರ್ವಕಾಲಿಕ ಅತ್ಯಧಿಕ ರನ್ ಸ್ಕೋರರ್ ದಾಖಲೆ ಬರೆಯಲು ಅವರಿಗೆ ಒಳ್ಳೆಯ ಅವಕಾಶವಿದೆ’ ಎಂದಿದ್ಧಾರೆ.

ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ 14,085 ರನ್ ಗಳಿಸಿದ್ದು, ಮೊದಲ ಸ್ಥಾನದಲ್ಲಿರುವ ತೆಂಡೂಲ್ಕರ್ 18,426 ರನ್ ಗಳಿಸಿದ್ದಾರೆ. ಸಚಿನ್ಗಿಂತಲೂ ಕೊಹ್ಲಿ ಇನ್ನೂ 4,341 ರನ್ಗಳಷ್ಟು ಹಿಂದೆ ಇದ್ದಾರೆ. 14234 ರನ್ ಗಳಿಸಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕರ ಎರಡನೇ ಸ್ಥಾನದಲ್ಲಿದ್ದಾರೆ.

ಆದರೆ, ಈ ದಾಖಲೆ ಮಾಡುವುದು ಕೊಹ್ಲಿಗೆ ಅಸಾಧ್ಯವಾದ ಕೆಲಸ ಎಂದು ನನಗನಿಸುವುದಿಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.

ಉತ್ತಮ ಫಿಟ್ನೆಸ್ ಕಾಪಾಡಿಕೊಂಡಿರುವ ವಿರಾಟ್ ತಂಡಕ್ಕಾಗಿ ಶ್ರಮವಹಿಸಿ ಆಡುತ್ತಾರೆ. ಅವರು ಸಚಿನ್ಗಿಂತಲೂ ಕೇವಲ 4,000 ರನ್ ಹಿನ್ನಡೆಯಲ್ಲಿದ್ದಾರೆ. ಕೊಹ್ಲಿ ಅವರಲ್ಲಿ ರನ್ನಿನ ಹಸಿವು ಈಗಲೂ ಇದೆ ಎಂದಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನವು ಅವರನ್ನು ಬಿಗ್ ಮ್ಯಾಚ್ ಪ್ಲೇಯರ್ ಆಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಮ್ಮೆ ಕೊಹ್ಲಿ ಅದನ್ನು ಸಾಬೀತು ಮಾಡಿದ್ದಾರೆ. ಅವರು ದೀರ್ಘಕಾಲದಿಂದ ಚಾಂಪಿಯನ್ ಆಟಗಾರರಾಗಿದ್ದಾರೆ. ವಿಶೇಷವಾಗಿ, 50 ಓವರ್ಗಳ ಕ್ರಿಕೆಟ್ ಮಾದರಿಯಲ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ’ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಪಾಂಟಿಂಗ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಕೋರ್ ಕಾರ್ಡ್ ಗಮನಿಸಿದರೆ, ಅಲ್ಲಿ ಕೊಹ್ಲಿ ಶತಕ ನಿಮಗೆ ವಿಶಿಷ್ಟವಾಗಿ ಕಾಣುತ್ತದೆ. ಪಾಕಿಸ್ತಾನದ ಯಾರೊಬ್ಬರಿಂದಲೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.