ಮಂಗಳವಾರ, ಜೂನ್ 28, 2022
21 °C

ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮರಿನ್; ಸಿಂಧು ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಟೊಕಿಯೊ ಒಲಿಂಪಿಕ್ಸ್‌ನಿಂದ ಸ್ಪೇನ್‌ನ ಬ್ಯಾಡ್ಮಿಂಟನ್ ತಾರೆ ಕರೊಲಿನಾ ಮರಿನ್ ಹಿಂದೆ  ಸರಿದಿರುವುದಕ್ಕೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬೇಸರ ವ್ಯಕ್ತಪಡಿಸಿದ್ದಾರೆ.

ಮರಿನ್ ಮೊಣಕಾಲಿಗೆ ಗಾಯವಾಗಿರುವುದರಿಂದ ಅವರು ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ.

ತಮ್ಮ ಗೆಳತಿ ಮರಿನ್‌ಗೆ ಟ್ವೀಟ್ ಮಾಡಿರುವ ಸಿಂಧು, ‘ನೀವು ಗಾಯಗೊಂಡಿರುವ ವಿಷಯ ತಿಳಿದು ಬೇಸರವಾಯಿತು. ಶೀಘ್ರ ಗುಣಮುಖರಾಗಿ, ಮತ್ತಷ್ಟು ಬಲಶಾಲಿಯಾಗಿ ಕಣಕ್ಕೆ ಮರಳಿರಿ‘ ಎಂದು ಹಾರೈಸಿದ್ದಾರೆ.

ರಿಯೊ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್‌ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ತಾವು ಮತ್ತು ಮರಿನ್ ಮುಖಾಮುಖಿಯಾಗಿದ್ದನ್ನೂ ಸಿಂಧು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಶನಿವಾರ ಅಭ್ಯಾಸ ನಡೆಸುವ ಸಂದರ್ಭದಲ್ಲಿ 27 ವರ್ಷದ ಮರಿನ್ ಬಲಮೊಣಕಾಲಿನ ನೋವಿನಿಂದ ಬಳಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.