ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು 2022ರಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಕ್ವಾಲಿಫೈಯರ್ನಲ್ಲಿ ಅರ್ಹತೆ ಪಡೆದ ತಂಡದ ಎದುರು ಆಡಲಿದೆ.

ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನವು 2022ರ ಮಾರ್ಚ್ 6ರಂದು ಬೇ ಓವಲ್ನಲ್ಲಿ ಆರಂಭವಾಗಲಿದೆ.

ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 12 ಮತ್ತು 22ರಂದು ನಡೆಯುವ ಪಂದ್ಯಗಳಲ್ಲಿಯೂ ಭಾರತವು ಅರ್ಹತಾ ಸುತ್ತಿನಿಂದ ಬಂದ ತಂಡಗಳನ್ನು ಎದುರಿಸಲಿದೆ.

ಉಳಿದಂತೆ ಭಾರತವು ಮಾರ್ಚ್ 10ರಂದು ನ್ಯೂಜಿಲೆಂಡ್, 16ರಂದು ಇಂಗ್ಲೆಂಡ್, 19ರಂದು ಆಸ್ಟ್ರೇಲಿಯಾ ಮತ್ತು 27ರಂದು ದಕ್ಷಿಣ ಆಫ್ರಿಕಾ ಎದುರು ಆಡಲಿದೆ.

ಟೂರ್ನಿಯಲ್ಲಿ ಎಂಟು ತಂಡಗಳು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಸ್ಪರ್ಧಿಸಲಿವೆ. ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿವೆ. ಉಳಿದ ಮೂರು ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರವೇಶಿಸಲಿವೆ.

ಟೂರ್ನಿಯ ಉದ್ಘಾಟನೆ ಪಂದ್ಯವು ತೌರಂಗಾದಲ್ಲಿ ನಡೆಯುವುದು. ನ್ಯೂಜಿಲೆಂಡ್ ತಂಡವು ಕ್ವಾಲಿಫೈಯರ್ನಿಂದ ಬಂದ ತಂಡವನ್ನು ಎದುರಿಸುವುದು

ಮಾರ್ಚ್ 30 ಮತ್ತು 31ರಂದು ಸೆಮಿಫೈನಲ್ ಪಂದ್ಯಗಳು ಹಾಗೂ ಏಪ್ರಿಲ್ ಮೂರರನ್ನು ಹೆಗ್ಲಿ ಓವಲ್ನಲ್ಲಿ ಫೈನಲ್ ಪಂದ್ಯವು ಆಯೋಜನೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.