ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರ‍್ಯಾಂಕಿಂಗ್‌ನ ಆರು ಅಗ್ರ ತಂಡಗಳಿಗೆ ನೇರ ಪ್ರವೇಶ

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್
Last Updated 18 ನವೆಂಬರ್ 2020, 15:29 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮುಂದಿನ ಏಪ್ರಿಲ್ 1ರ ವೇಳೆಗೆ ಅಗ್ರ ಆರು ಸ್ಥಾನ ಪಡೆಯುವ ಮಹಿಳಾ ಕ್ರಿಕೆಟ್ ತಂಡಗಳು ಕಾಮನ್‌ವೆಲ್ತ್‌ ಗೇಮ್ಸ್‌ಗೆ ನೇರಪ್ರವೇಶ ಪಡೆಯಲಿವೆ.

2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕೂಟಕ್ಕೆ ಆತಿಥೇಯ ಇಂಗ್ಲೆಂಡ್ ಕೂಡ ವೈಲ್ಡ್‌ಕಾರ್ಡ್‌ ಗಿಟ್ಟಿಸಿದೆ.

ಇದೇ ಮೊದಲ ಬಾರಿಗೆ ಕಾಮನ್‌ವೇಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ನಡೆಯಲಿದೆ. ಈ ಕೂಟದಲ್ಲಿ ಪ್ರವೇಶ ಪಡೆಯುವ ಆಯ್ಕೆ ಪ್ರಕ್ರಿಯೆಯ ನಿಯಮಾವಳಿಯನ್ನು ಬುಧವಾರ ಐಸಿಸಿ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್ ಆಯ್ಕೆ ಪ್ರಕ್ರಿಯೆಯ ನಿಯಮಾವಳಿಯನ್ನು ಬಿಡುಗಡೆ ಮಾಡಿದವು.

’ಇಂಗ್ಲೆಂಡ್ ನೇರಪ್ರವೇಶ ಪಡೆದಿದೆ.ಐಸಿಸಿ ಮಹಿಳಾ ಟ್ವೆಂಟಿ–20 ರ‍್ಯಾಂಕಿಂಗ್‌ನಲ್ಲಿ ಮುಂದಿನ ವರ್ಷದ ಏಪ್ರಿಲ್ 1ರ ವೇಳೆಗೆ ಅಗ್ರ ಆರು ಸ್ಥಾನದಲ್ಲಿರುವ ತಂಡಗಳು ಅವಕಾಶ ಪಡೆಯಲಿವೆ. ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ‘ ಎಂದು ಐಸಿಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸದ್ಯದ ಪಟ್ಟಿಯಲ್ಲಿ ಭಾರತ ತಂಡವು ಎರಡನೇ ಸ್ಥಾನದಲ್ಲಿದೆ. ಇದೇ ಸ್ಥಾನವನ್ನು ಕಾಪಾಡಿಕೊಂಡರೆ ಮುಂದಿನ ಹಾದಿ ಸುಲಭವಾಗಲಿದೆ.

ಕೂಟದಲ್ಲಿ ಸ್ಪರ್ಧಿಸುವ ಇನ್ನೊಂದು (ಎಂಟನೇ) ತಂಡವನ್ನು ಕಾಮನ್‌ವೆಲ್ತ್‌ ಗೇಮ್ಸ್‌ ಗಾಗಿ ನಡೆಸಲಾಗುವ ಅರ್ಹತಾ ಸುತ್ತಿನಿಂದ ಆಯ್ಕೆ ಮಾಡಲಾಗುವುದು. ಕ್ವಾಲಿಫೈಯರ್‌ ನಡೆಸಲು 2022ರ ಜನವರಿ 31 ಕೊನೆಯ ದಿನವಾಗಿದೆ.

’ಕಾಮನ್‌ವೆಲ್ತ್ ಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿರುವುದು ನಮಗೆ ಸಿಕ್ಕಿರುವ ಉತ್ತಮ ಅವಕಾಶವಾಗಿದೆ. ಮಹಿಳಾ ಕ್ರಿಕೆಟ್‌ ಅನ್ನು ವಿಶ್ವದ ಬೇರೆ ಬೇರೆ ದೇಶಗಳಿಗೆ ಪರಿಚಯಿಸಲು ಉತ್ತಮ ವೇದಿಕೆ ಲಭಿಸಿದಂತಾಗಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿದೆ‘ ಎಂದು ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಮನು ಸವಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT