ಲಾಹೋರ್: ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ (177, 146 ಎಸೆತ) ಅವರ ಅತ್ಯಮೋಘ ಶತಕದ ಬಳಿಕ, ಅಜ್ಮತ್ವುಲ್ಲಾ ಒಮರ್ಝೈ ಐದು ವಿಕೆಟ್ ಗೊಂಚಲು ಪಡೆದು ಅಫ್ಗಾನಿಸ್ತಾನ ತಂಡ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ತಂಡ ಕೊನೆಯವರೆಗೆ ಹೋರಾಟ ತೋರಿದರೂ ಎಂಟು ರನ್ಗಳಿಂದ ಸೋತು ಟೂರ್ನಿಯಿಂದ ಹೊರಬಿತ್ತು.

‘ಬಿ’ ಗುಂಪಿನ ಈ ಪಂದ್ಯದಲ್ಲಿ ಇದು ಇಂಗ್ಲೆಂಡ್ಗೆ ಸತತ ಎರಡನೇ ಸೋಲು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಅಫ್ಗಾನಿಸ್ತಾನ 50 ಓವರುಗಳಲ್ಲಿ 7 ವಿಕೆಟ್ಗೆ 325 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 49.5 ಓವರುಗಳಲ್ಲಿ 317 ರನ್ಗಳಿಗೆ ಆಲೌಟ್ ಆಯಿತು. ಜೋ ರೂಟ್ (120, 111 ಎಸೆತ) ಅವರು ಕ್ರೀಸ್ನಲ್ಲಿರುವವರೆಗೆ ಇಂಗ್ಲೆಂಡ್ ಆಸೆ ಜೀವಂತವಾಗಿತ್ತು. ಅವರು ಏಳನೇಯವರಾಗಿ ನಿರ್ಗಮಿಸಿದ ಮೇಲೆ ಅಫ್ಗನ್ನರು ಮರಳಿ ಹಿಡಿತ ಸಾಧಿಸಿದರು.

ದೊಡ್ಡ ಮೊತ್ತದ ಬೆನ್ನಟ್ಟಿದ ಇಂಗ್ಲೆಂಡ್ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ರೂಟ್ ಮತ್ತು ನಾಯಕ ಜೋಸ್ ಬಟ್ಲರ್ (38, 42ಎ) ಐದನೇ ವಿಕೆಟ್ಗೆ 83 ರನ್ ಸೇರಿಸಿದ್ದೇ ತಂಡದ ದೊಡ್ಡ ಜೊತೆಯಾಟ ಎನಿಸಿತು. ವೇಗ ಮತ್ತು ಸ್ಪಿನ್ ಬೌಲರ್ಗಳು ಇಂಗ್ಲೆಂಡ್ ನಾಗಾಲೋಟದಲ್ಲಿ ಸಾಗದಂತೆ ಕಡಿವಾಣ ಹಾಕಿದರು.

ಈ ಫಲಿತಾಂಶದ ಮೂಲಕ ಐಸಿಸಿ ಟೂರ್ನಿಗಳಲ್ಲಿ ಕಠಿಣ ಸ್ಪರ್ಧೆಯೊಡ್ಡುವ ತಂಡ ತಾನೆಂಬುದನ್ನು ಅಫ್ಗನ್ನರ ಪಡೆ ಸಾರಿತು. ಒಮರ್ಝೈ ಬ್ಯಾಟಿಂಗ್ನಲ್ಲೂ ಮಿಂಚಿ ಉಪಯುಕ್ತ 41 ರನ್ (31 ಎಸೆತ) ಗಳಿಸಿದ್ದರು.

ಆರಂಭದಲ್ಲೇ ಆಘಾತ ಅನುಭವಿಸಿದ ಜದ್ರಾನ್ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಹಷ್ಮತ್ವುಲ್ಲಾ ಶಾಹೀದಿ (40, 67 ಎಸೆತ), ಅಜ್ಮತ್ವುಲ್ಲಾ ಮತ್ತು ಮೊಹಮ್ಮದ್ ನಬಿ (40, 24 ಎಸೆತ) ಅವರು ಉಪಯುಕ್ತ ಬೆಂಬಲ ನೀಡಿದ ಪರಿಣಾಮ ಅಫ್ಗಾನಿಸ್ತಾನ ತಂಡದ ಮೊತ್ತ ಬೆಳೆಯಿತು. ಜದ್ರಾನ್ ಆಟದಲ್ಲಿ 12 ಬೌಂಡರಿ ಮತ್ತು ಅರ್ಧ ಡಜನ್ ಸಿಕ್ಸರ್ಗಳಿದ್ದವು.

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಹೆಗ್ಗಳಿಕೆ
ಅವರದ್ದಾಯಿತು. ಲಾಹೋರ್ನಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಎದುರು ಇಂಗ್ಲೆಂಡ್ನ ಬೆನ್ ಡಕೆಟ್ (165 ರನ್) ದಾಖಲೆಯನ್ನು ಜದ್ರಾನ್ ಮೀರಿನಿಂತರು.

ಅಫ್ಗಾನಿಸ್ತಾನ ಬೇಗನೇ ಮೂರು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹಾಕಿದ ಐದನೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಉರುಳಿಸಿದರು. ರಹಮಾನುಲ್ಲಾ ಗುರ್ಬಾಜ್ (6) ಕ್ಲೀನ್ಬೌಲ್ಡ್ ಆದರೆ, ಸಿದ್ದಿಕುಲಾ ಅಟಲ್ (4) ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನಾಲ್ಕು ಓವರ್ಗಳ ನಂತರ ರೆಹಮತ್ ಅವರು ಜೋಫ್ರಾ ಎಸೆತದಲ್ಲಿ ಆದಿಲ್ ರಶೀದ್ಗೆ ಕ್ಯಾಚಿತ್ತರು. ಇದರಿಂದಾಗಿ 37 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಅಫ್ಗನ್ ಸಂಕಷ್ಟಕ್ಕೀಡಾಯಿತು.

ಜದ್ರಾನ್ ಅವರಿಗೆ ಇದು ಏಕದಿನ ಕ್ರಿಕೆಟ್ನಲ್ಲಿ ಆರನೇ ಶತಕ. 106 ಎಸೆತಗಳಲ್ಲಿ ಮೂರಂಕಿ ಮೊತ್ತ ಮುಟ್ಟಿದರು. ಓವರ್ಟನ್ ಅವರ ಒಂದೇ ಓವರ್ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಹೊಡೆದರು. ಆರ್ಚರ್ ಅವರನ್ನೂ ಬಿಡಲಿಲ್ಲ. ಅವರ ಒಂದೇ ಓವರ್ನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಬಾರಿ 150 ರನ್ ಗಡಿಯನ್ನು ದಾಟಿದರು.

ಸಂಕ್ಷಿಪ್ತ ಸ್ಕೋರು

ಅಫ್ಗಾನಿಸ್ತಾನ: 50 ಓವರ್ಗಳಲ್ಲಿ 7ಕ್ಕೆ325 (ಇಬ್ರಾಹಿಂ ಜದ್ರಾನ್ 177, ಹಷ್ಮತ್ ಉಲ್ಲಾ ಶಾಹೀದಿ 40, ಅಜ್ಮತ್ಉಲ್ಲಾ ಶಹೀದಿ 41, ಮೊಹಮ್ಮದ್ ನಬಿ 40, ಜೋಫ್ರಾ ಆರ್ಚರ್ 64ಕ್ಕೆ3, ಲಿಯಾಮ್ ಲಿವಿಂಗ್ಸ್ಟೋನ್ 28ಕ್ಕೆ2)

ಇಂಗ್ಲೆಂಡ್: 49.5 ಓವರುಗಳಲ್ಲಿ 317 (ಬೆನ್ ಡಕೆಟ್ 38, ಜೋ ರೂಟ್ 120, ಹ್ಯಾರಿ ಬ್ರೂಕ್ 25, ಜೋಸ್ ಬಟ್ಲರ್ 38, ಜೇಮಿ ಓವರ್ಟನ್ 32; ಅಜ್ಮತ್ವುಲ್ಲಾ ಒಮರ್ಝೈ 58ಕ್ಕೆ5, ಮೊಹಮ್ಮದ್ ನಬಿ 57ಕ್ಕೆ2).

ಪಂದ್ಯದ ಆಟಗಾರ: ಇಬ್ರಾಹಿಂ ಜದ್ರಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.