ದುಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಮುನ್ನ ಭಾರತ ತಂಡವು ಯಾವುದೇ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ.

ಆತಿಥೇಯ ಪಾಕಿಸ್ತಾನವು ಮೂರು ಶಾಹೀನ್ಸ್ ಬಳಗಗಳನ್ನು (ಪಾಕ್ ಎ ತಂಡಗಳು) ರಚಿಸಿದೆ. ಈ ಮೂರು ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಆಡಲಿವೆ. ಕ್ರಮವಾಗಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ತಾನ ತಂಡಗಳನ್ನು ಎದುರಿಸಲಿವೆ. ಅಫ್ಗನ್ ತಂಡವು ಫೆ. 16ರಂದು ನ್ಯೂಜಿಲೆಂಡ್ ವಿರುದ್ಧವೂ ಅಭ್ಯಾಸ ಪಂದ್ಯ ಆಡಲಿದೆ.

ಅಭ್ಯಾಸ ಪಂದ್ಯಗಳು ಫೆಬ್ರುವರಿ 14 ರಿಂದ 17ರವರೆಗೆ ನಡೆಯಲಿವೆ. ಟೂರ್ನಿಯು ಫೆ. 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಪಾಕಿಸ್ತಾನದಲ್ಲಿವೆ. ತ್ರಿಕೋನ ಸರಣಿಯಲ್ಲಿ ಆಡುತ್ತಿವೆ. ಫೆ. 14ರಂದು ಲಾಹೋರ್ನಲ್ಲಿ ಅಫ್ಗನ್ ವಿರುದ್ಧ ನಡೆಯುವ ಅಭ್ಯಾಸ ಪಂದ್ಯದಲ್ಲಿ ಶಾಹೀನ್ಸ್ ಬಳಗವನ್ನು ಶಾದಾಬ್ ಖಾನ್ ಮುನ್ನಡೆಸಲಿದ್ದಾರೆ. ಉಳಿದ ಎರಡು ಶಾಹೀನ್ಸ್ ತಂಡಗಳು ಕರಾಚಿ ಮತ್ತು ದುಬೈನಲ್ಲಿ ಫೆ. 17ರಂದು ಆಡಲಿವೆ. ದಕ್ಷಿಣ ಆಫ್ರಿಕಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಹುರೈರಾ ಮತ್ತು ದುಬೈನಲ್ಲಿ ನಡೆಯುವ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಮೊಹಮ್ಮದ್ ಹ್ಯಾರಿಸ್ ಅವರು ಶಾಹೀನ್ಸ್ ತಂಡಗಳನ್ನು ಮುನ್ನಡೆಸುವರು.

ಭಾರತ ತಂಡವು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಿದೆ. ಅದರಿಂದಾಗಿ ಅಭ್ಯಾಸ ಪಂದ್ಯಗಳಿಗೆ ಒತ್ತು ನೀಡಿಲ್ಲವೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.