ಬುಧವಾರ, ಫೆಬ್ರವರಿ 26, 2020
19 °C

ರ‍್ಯಾಂಕಿಂಗ್‌: ಬೂಮ್ರಾ, ಪಂತ್‌ ಶ್ರೇಷ್ಠ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಭಾರತದ ಜಸ್‌ಪ್ರೀತ್ ಬೂಮ್ರಾ ಮತ್ತು ರಿಷಭ್‌ ಪಂತ್‌ ಅವರು ಗುರುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಹೊಂದಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಿಷಭ್‌ ಅವರು 48ನೇ ಸ್ಥಾನಕ್ಕೇರಿದ್ದಾರೆ. ಅವರು 11 ಸ್ಥಾನ ಪ್ರಗತಿ ಕಂಡಿ ದ್ದಾರೆ. ಇದು ಪಂತ್‌ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌, ಶತಕ ಸಿಡಿಸಿದ್ದರು. ಈ ಮೂಲಕ 14 ಪಾಯಿಂಟ್ಸ್‌ ಕಲೆಹಾಕಿ ಒಟ್ಟು ಪಾಯಿಂಟ್ಸ್‌ ಅನ್ನು 934ಕ್ಕೆ ಹೆಚ್ಚಿಸಿ ಕೊಂಡಿದ್ದಾರೆ.

ಭಾರತ ಟೆಸ್ಟ್‌ ತಂಡದ ಉಪ ನಾಯಕ ಅಜಿಂಕ್ಯ ರಹಾನೆ 15ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಎರಡು ಸ್ಥಾನ ಮೇಲೇರಿದ್ದಾರೆ. ನ್ಯೂಜಿ ಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಭಾರತದ ಚೇತೇ ಶ್ವರ ಪೂಜಾರ ಅವರು ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.

ಶ್ರೀಲಂಕಾ ಎದು ರಿನ ಟೆಸ್ಟ್‌ ಪಂದ್ಯ ದಲ್ಲಿ ದ್ವಿಶತಕ (264 ರನ್‌) ಸಿಡಿಸಿ ಮಿಂಚಿದ್ದ ನ್ಯೂಜಿಲೆಂಡ್‌ ತಂಡದ ಆಟಗಾರ ಟಾಮ್‌ ಲಥಾಮ್‌ 22ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ 28ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಮೊಹಮ್ಮದ್‌ ಶಮಿ ಎರಡು ಸ್ಥಾನ ಮೇಲೇರಿದ್ದು 24ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್‌ ತಂಡದ ಬೌಲರ್‌ ಟಿಮ್‌ ಸೌಥಿ 11ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ. ಶ್ರೀಲಂಕಾ ಎದುರಿನ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ ಉರುಳಿಸಿದ್ದ ಸೌಥಿ, ನಾಲ್ಕು ಸ್ಥಾನ ಮೇಲೇರಿದ್ದಾರೆ.

ಆಸ್ಟ್ರೇಲಿಯಾದ ನೇಥನ್‌ ಲಯನ್‌ ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಯಾಗಿದೆ. ಜೋಶ್‌ ಹ್ಯಾಜಲ್‌ವುಡ್‌ ಮತ್ತು ಮಿಷೆಲ್‌ ಸ್ಟಾರ್ಕ್‌ ಅವರು ಕ್ರಮವಾಗಿ ಒಂಬತ್ತು ಮತ್ತು 15ನೇ ಸ್ಥಾನಗಳಲ್ಲಿದ್ದಾರೆ.

ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಪಟ್ಟ ಉಳಿಸಿಕೊಂಡಿದೆ. ವಿರಾಟ್‌ ಪಡೆಯ ಖಾತೆಯಲ್ಲಿ 116 ಪಾಯಿಂಟ್ಸ್‌ ಇವೆ.

ಇಂಗ್ಲೆಂಡ್‌ ತಂಡ ನಂತರದ ಸ್ಥಾನದಲ್ಲಿದೆ. ಆಂಗ್ಲರ ನಾಡಿನ ತಂಡ ಒಟ್ಟು 108 ಪಾಯಿಂಟ್ಸ್‌ ಹೊಂದಿದೆ.

ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳು ಕ್ರಮವಾಗಿ ಮೂರರಿಂದ ಹತ್ತನೇ ಸ್ಥಾನಗಳಲ್ಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು