ಗುರುವಾರ , ಅಕ್ಟೋಬರ್ 1, 2020
20 °C
2020ರ ವರ್ಷದ ಮೊದಲಾರ್ಧದ ದತ್ತಾಂಶ

ಐಸಿಸಿ ವಿಡಿಯೊ ಚಾನೆಲ್‌: 165 ಕೋಟಿ ವೀಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ‌ (ಐಸಿಸಿ) ವಿಡಿಯೊ ಚಾನೆಲ್‌ ಈ ವರ್ಷದ ಮೊದಲಾರ್ಧದಲ್ಲಿ ಫೇಸ್‌ಬುಕ್‌ನಲ್ಲಿ 165 ಕೋಟಿ ವೀಕ್ಷಣೆಗಳನ್ನು ಗಳಿಸಿದೆ. 

ವಿಶ್ವದ ಇತರ ಕ್ರೀಡಾ ಫೆಡರೇಷನ್‌ಗಳ ವಿಡಿಯೊ ವಾಹಿನಿಗಳಿಗೆ ಲಭಿಸಿದ ಮನ್ನಣೆಗಿಂತ ಇದು ಎರಡು ಪಟ್ಟು ಹೆಚ್ಚು ಎಂದು ಮಂಡಳಿ ಶುಕ್ರವಾರ ಹೇಳಿದೆ.

ಫೇಸ್‌ಬುಕ್‌ ಒಡೆತನದ ‘ಕ್ರೌಡ್‌ಟ್ಯಾಂಗಲ್ಸ್‌‘ ವಿಶ್ಲೇಷಣೆಯ ಮೂಲಕ ಈ ಫಲಿತಾಂಶವನ್ನು ಪಡೆಯಲಾಗಿದೆ.

ಈ ಹಿಂದಿನ 12 ತಿಂಗಳುಗಳಲ್ಲಿ, ಫೇಸಬುಕ್‌ ಚಾನೆಲ್ ತನ್ನ ವಿಭಾಗದಲ್ಲಿ‌ ಹೆಚ್ಚು ತೊಡಗಿಸಿಕೊಂಡ ಪೇಜ್‌ ಎಂದು ಐಸಿಸಿ ಹೇಳಿಕೊಂಡಿದೆ.

‘19 ವರ್ಷದೊಳಗಿನವರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಫೈನಲ್‌ ಪಂದ್ಯವನ್ನು 44 ಲಕ್ಷ ಜನ ವೀಕ್ಷಿಸಿದ್ದಾರೆ. ಇದು ದಿನವೊಂದರಲ್ಲಿ ದಾಖಲಾದ ಅತಿ ಹೆಚ್ಚು ವೀಕ್ಷಣೆ‘ ಎಂದು ವಿಶ್ವ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಈ ಹಣಾಹಣಿಯಲ್ಲಿ ಬಾಂಗ್ಲಾದೇಶದ ಕಿರಿಯರು  ಭಾರತವನ್ನು ಸೋಲಿಸಿ ಚಾಂಪಿಯನ್‌ ಆಗಿದ್ದರು.

‘ಮಾರ್ಚ್‌ ತಿಂಗಳಲ್ಲಿ ನಡೆದ ಐಸಿಸಿ ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ವಿಡಿಯೊ ಚಾನೆಲ್‌ಗಳು ಒಟ್ಟು 101 ಕೋಟಿ ವೀಕ್ಷಣೆ ಗಳಿಸಿವೆ. 2018ರ ಆವೃತ್ತಿಯ ಪ್ರಮಾಣಕ್ಕಿಂತ ಇದು ಶೇ 1900ರಷ್ಟು ಹೆಚ್ಚು‘ ಎಂದು ಐಸಿಸಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು