ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20WC: ಭಾರತದ ಗುಂಪಿನಲ್ಲಿ ಸ್ಕಾಟ್ಲೆಂಡ್, ನಮೀಬಿಯಾ; ಇಲ್ಲಿದೆ 'ಸೂಪರ್-12' ಪಟ್ಟಿ

Last Updated 22 ಅಕ್ಟೋಬರ್ 2021, 17:15 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಗುಂಪು 'ಎ' ಹಾಗೂ ಗುಂಪು 'ಬಿ'ನಲ್ಲಿ ಸ್ಪರ್ಧಿಸಿರುವ ಒಟ್ಟು ಎಂಟು ತಂಡಗಳ ಪೈಕಿ ಪ್ರತಿ ಗುಂಪಿನಿಂದಲೂತಲಾ ಎರಡು ತಂಡಗಳು 'ಸೂಪರ್-12' ಹಂತಕ್ಕೆ ಲಗ್ಗೆಯಿಟ್ಟಿವೆ. ಉಳಿದ ನಾಲ್ಕು ತಂಡಗಳು ಕೂಟದಿಂದಲೇ ನಿರ್ಗಮಿಸಿವೆ.

'ಎ' ಗುಂಪಿನ ಅಗ್ರಸ್ಥಾನಿಯಾಗಿರುವ ಶ್ರೀಲಂಕಾ, ಸೂಪರ್-12ರ ಹಂತದಲ್ಲಿ 'ಗ್ರೂಪ್ 1'ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅತ್ತ 'ಬಿ' ಗುಂಪಿನ ಅಗ್ರ ತಂಡ ಸ್ಕಾಟ್ಲೆಂಡ್ 'ಗ್ರೂಪ್ 2'ರಲ್ಲಿ ಕಾಣಿಸಿಕೊಂಡಿದೆ. 'ಎ' ಗುಂಪಿನ ಎರಡನೇ ತಂಡ ನಮೀಬಿಯಾ 'ಗ್ರೂಪ್ 2' ಅನ್ನು ಮತ್ತು 'ಬಿ' ಗುಂಪಿನ ಎರಡನೇ ತಂಡ ಬಾಂಗ್ಲಾದೇಶ 'ಗ್ರೂಪ್ 1'ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಇದರೊಂದಿಗೆ ಭಾರತ ಇರುವ 'ಗ್ರೂಪ್ 2'ಕ್ಕೆ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಲಗ್ಗೆಯಿಟ್ಟಿವೆ. ಭಾರತವು ನವೆಂಬರ್ 5ರಂದು ಸ್ಕಾಟ್ಲೆಂಡ್ ಹಾಗೂ ನ. 8ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿವೆ.

ಸೂಪರ್-12 'ಗ್ರೂಪ್ 1' ತಂಡಗಳು ಇಂತಿದೆ:
ಆಸ್ಟ್ರೇಲಿಯಾ,
ಇಂಗ್ಲೆಂಡ್,
ದಕ್ಷಿಣ ಆಫ್ರಿಕಾ,
ವೆಸ್ಟ್‌ಇಂಡೀಸ್,
ಶ್ರೀಲಂಕಾ,
ಬಾಂಗ್ಲಾದೇಶ,

ಸೂಪರ್-12 'ಗ್ರೂಪ್ 2' ಇಂತಿದೆ:
ಭಾರತ,
ಪಾಕಿಸ್ತಾನ,
ನ್ಯೂಜಿಲೆಂಡ್,
ಅಫ್ಗಾನಿಸ್ತಾನ,
ಸ್ಕಾಟ್ಲೆಂಡ್
ನಮೀಬಿಯಾ,

ಸೂಪರ್-12 ಹಂತದಲ್ಲಿ 'ಗ್ರೂಪ್ 1' ಹಾಗೂ 'ಗ್ರೂಪ್ 2'ರ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಬಳಿಕ ಫೈನಲ್ ನವೆಂಬರ್ 14 ಭಾನುವಾರ ದುಬೈಯಲ್ಲಿ ನಡೆಯಲಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ ಇಂತಿದೆ:
ಅ. 24: ಭಾರತ vs ಪಾಕಿಸ್ತಾನ, ದುಬೈ
ಅ. 31: ಭಾರತ vs ನ್ಯೂಜಿಲೆಂಡ್, ದುಬೈ
ನ. 03: ಭಾರತ vs ಅಫ್ಗಾನಿಸ್ತಾನ, ಅಬುಧಾಬಿ
ನ. 05: ಭಾರತ vs ಸ್ಕಾಟ್ಲೆಂಡ್, ದುಬೈ
ನ. 08: ಭಾರತ vs ನಮೀಬಿಯಾ, ದುಬೈ

ಸೂಪರ್-12 ಪ್ರವೇಶಿಸಿದ ತಂಡಗಳು ಇಂತಿದೆ:
ಗುಂಪು 'ಎ': ಶ್ರೀಲಂಕಾ ಹಾಗೂ ನಮೀಬಿಯಾ
ಗುಂಪು 'ಬಿ': ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶ

ನಿರ್ಗಮಿಸಿದ ತಂಡಗಳು:
ಗುಂಪು 'ಎ': ಐರ್ಲೆಂಡ್ ಹಾಗೂ ನೆದರ್ಲೆಂಡ್ಸ್
ಗುಂಪು 'ಬಿ': ಒಮನ್ ಹಾಗೂ ಪಪುವಾ ನ್ಯೂಗಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT