ದುಬೈ: ನೂತನ ಐಸಿಸಿ ಟಿ–20 ರ್ಯಾಂಕಿಂಗ್ನ ಟಾಪ್ –10 ಬ್ಯಾಟರ್ ಹಾಗೂ ಬೌಲರ್ಗಳ ಪಟ್ಟಿಯಲ್ಲಿ ಹಲವು ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ.

ಬ್ಯಾಟರ್ಗಳ ಪಟ್ಟಿಯಲ್ಲಿ 829 ಪಾಯಿಂಟ್ಗಳೊಂದಿಗೆ ಅಭಿಷೇಕ್ ಶರ್ಮಾ ಅವರು ಅಗ್ರಸ್ಥಾನದಲ್ಲಿದ್ದಾರೆ. 804 ಪಾಯಿಂಟ್ಗಳೊಂದಿಗೆ ತಿಲಕ್ ವರ್ಮಾ ಅವರು ಎರಡನೇ ಸ್ಥಾನದಲ್ಲಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಅವರು 739 ಪಾಯಿಂಟ್ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಏಷ್ಯಾ ಕಪ್ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 11ನೇ ಸ್ಥಾನದಲ್ಲಿದ್ದಾರೆ.

ಆಲ್ರೌಂಡರ್ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿದ್ದಾರೆ. ಎರಡು ಸ್ಥಾನ ಕುಸಿತ ಕಂಡಿರುವ ಅಕ್ಷರ್ ಪಟೇಲ್ 13ನೇ ಸ್ಥಾನದಲ್ಲಿದ್ದಾರೆ

ಬೌಲರ್ಗಳ ಪಟ್ಟಿಯಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು 706 ಪಾಯಿಂಟ್ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ರವಿ ಬಿಷ್ಣೋಯಿ ಒಂದು ಸ್ಥಾನ ಮೇಲೇರಿದ್ದು 6ನೇ ಸ್ಥಾನದಲ್ಲಿದ್ದಾರೆ. ವೇಗಿ ಅರ್ಷದೀಪ್ ಸಿಂಗ್ ಅವರು 9ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.