ದುಬೈ: ಭಾರತ ತಂಡ ತವರಿನ ಅಂಗಣದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಗೆದ್ದ ದಶಮಾನೋತ್ಸವದ ಸಂಭ್ರಮ ಆಚರಣೆಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) #ಸಿಡಬ್ಲ್ಯುಸಿ11ರೀವೈಂಡ್ ಎಂಬ ಹೆಸರಿನಲ್ಲಿ ಸರಣಿಯೊಂದನ್ನು ಆರಂಭಿಸಿದೆ. ಇದಕ್ಕೆ ಶುಕ್ರವಾರ ಚಾಲನೆ ಸಿಗಲಿದೆ. ಟೂರ್ನಿಯ ಪ್ರಮುಖ ಅಂಶಗಳನ್ನು ಒಳಗೊಂಡ 100 ತುಣುಕುಗಳನ್ನು ಇದಕ್ಕಾಗಿ ಐಸಿಸಿ ಆರಿಸಿಕೊಂಡಿದೆ.

ಇದನ್ನುಓದಿ:ಆಟಗಾರರ ಹರಾಜು ಪ್ರಕ್ರಿಯೆಯ ಕ್ಷಣ ಕ್ಷಣದ ಮಾಹಿತಿ

ಪಂದ್ಯಗಳು ನಡೆದ ದಿನ ಐಸಿಸಿ ತನ್ನ ವೆಬ್ಸೈಟ್ನಲ್ಲಿ ಹಾಕಿದ ಪ್ರಮುಖ ಅಂಶಗಳು, ಆಯಾ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿದವರ ಆಟದ ಭಂಗಿ ಹಾಗೂ ಇತರ ಕೆಲವು ಭಾಗಗಳು ಕೂಡ ಸರಣಿಯಲ್ಲಿ ಇರುತ್ತವೆ. ಯುವ ಆಟಗಾರನಿಗೆ ಸಂಬಂಧಿಸಿದ ಇನ್ಸ್ಟಾಗ್ರಾಮ್ ಮಾಹಿತಿ, ಸಂದರ್ಶನ ಮತ್ತು ಟೂರ್ನಿಯ ಪ್ರಮುಖ ಆಟಗಾರರ ಕುರಿತ ಮಾಹಿತಿಯೂ ಇರಲಿದೆ.ಹಿಂದಿಯಲ್ಲೂ ಇಂಗ್ಲಿಷ್ನಲ್ಲೂ ವಿವರಣೆ ಇರುತ್ತದೆ.

‘ಇದು ಅನೇಕ ವರ್ಷಗಳ ಕನಸಿನ ಕೂಸು. ಭಾಷೆಗಳ ಮೂಲಕ ಈ ಸರಣಿಯು ಕ್ರಿಕೆಟ್ ಕ್ರೀಡೆಯನ್ನು ಜನಸಮುದಾಯಕ್ಕೆ ಇನ್ನಷ್ಟು ಹತ್ತಿರ ಮಾಡುವ ಉದ್ದೇಶ ಹೊಂದಿದೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಿದ ಎಲ್ಲ ಪಂದ್ಯಗಳ ಪ್ರಮುಖ ಅಂಶಗಳು ಸರಣಿಯಲ್ಲಿ ಇರುತ್ತವೆ’ ಎಂದು ಪ್ರಕಟಣೆಯಲ್ಲಿ ಐಸಿಸಿ ತಿಳಿಸಿದೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕಣಕ್ಕೆ ಇಳಿದಿದ್ದ ಭಾರತ ತಂಡ ಮುಂಬೈನಲ್ಲಿ ನಡೆದಿದ್ದ ಫೈನಲ್ನಲ್ಲಿ ಶ್ರೀಲಂಕಾವನ್ನು ಆರು ವಿಕೆಟ್ಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.