ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳದಿನವರ ವಿಶ್ವಕಪ್: ಜಯದ ಮೇಲೆ ಪ್ರಿಯಂ ಕಣ್ಣು

ಭಾರತ–ನ್ಯೂಜಿಲೆಂಡ್ ಹಣಾಹಣಿ ಇಂದು
Last Updated 23 ಜನವರಿ 2020, 19:45 IST
ಅಕ್ಷರ ಗಾತ್ರ

ಬ್ಲೂಮ್‌ಫೋಂಟೇನ್, ದಕ್ಷಿಣ ಆಫ್ರಿಕಾ: ಎಂಟರ ಘಟ್ಟದ ಸನಿಹದ ಲ್ಲಿರುವ ಭಾರತದ 19 ವರ್ಷದೊಳ ಗಿನವರ ತಂಡವು ಶುಕ್ರವಾರ ಇಲ್ಲಿ ನಡೆಯಲಿರುವ ಯುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಎ ಗುಂಪಿನಲ್ಲಿ ಪ್ರಿಯಂ ಗರ್ಗ್ ನಾಯಕತ್ವದ ತಂಡವು ಒಟ್ಟು ನಾಲ್ಕು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ತಂಡದ ಎದುರು 90 ರನ್‌ಗಳ ಜಯ, ಎರಡನೇ ಪಂದ್ಯದಲ್ಲಿ ಜಪಾನ್ ಎದುರು 10 ವಿಕೆಟ್‌ಗಳ ಗೆಲುವನ್ನು ಭಾರತ ತಂಡವು ಸಾಧಿಸಿತ್ತು.

ಕಿವೀಸ್ ಯುವಪಡೆಯು ತನ್ನ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಜಪಾನ್ ತಂಡದೊಂದಿಗೆ ಪಾಯಿಂಟ್ ಹಂಚಿಕೊಂಡಿತು. ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಎದುರು ಗೆದ್ದಿದೆ. ಇದರಿಂದಾಗಿ ಮೂರು ಪಾಯಿಂಟ್ಸ್‌ನೊಂದಿಗೆ ಎಂಟರ ಘಟ್ಟದ ಸನಿಹ ಬಂದು ನಿಂತಿದೆ.

ತಂಡಗಳು: ಭಾರತ (19ವರ್ಷದೊಳಗಿನವರು): ಪ್ರಿಯಂ ಗರ್ಗ್ (ನಾಯಕ), ಆಕಾಶ್ ಸಿಂಗ್, ಅಥರ್ವ ಅಂಕೋಲೆಕರ್, ಶುಭಾಂಗ್ ಹೆಗ್ಡೆ, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಕಾರ್ತಿಕ್ ತ್ಯಾಗಿ, ಕುಮಾರ ಖುಶಾಗ್ರ, ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ, ರವಿ ಬಿಷ್ಣೋಯ್, ಶಾಶ್ವತ್ ರಾವತ್, ದಿವ್ಯಾಂಶ್ ಸಕ್ಸೆನಾ, ತಿಲಕ್ ವರ್ಮಾ, ಸಿದ್ಧೇಶ್ ವೀರ್, ದಿವ್ಯಾಂಶ್ ಜೋಶಿ. ನ್ಯೂಜಿಲೆಂಡ್ (19 ವರ್ಷದೊಳಗಿನವರು):ಜೆಸ್ಸಿ ತಾಶ್ಕೋಫ್ (ನಾಯಕ), ಆದಿತ್ಯ ಅಶೋಕ್, ಕ್ರಿಸ್ಟೇನ್ ಕ್ಲಾರ್ಕ್, ಹೇಡನ್ ಡಿಕ್ಸನ್, ಜೋಯ್ ಫೀಲ್ಡ್, ಡೇವಿಡ್ ಹ್ಯಾಂಕಾಕ್, ಸೈಮನ್ ಕೀನ್, ಫರ್ಗಸ್ ಲೆಲ್‌ಮನ್, ನಿಕೋ ಲಸ್ ಲಿಡ್‌ಸ್ಟೋನ್, ರೈಸ್ ಮರಿಯು, ವಿಲಿಯಮ್ ಓ ರೂರ್ಕಿ, ಬೆನ್ ಪೊಮೇರ್, ಕ್ವಿನ್ ಸಂಡೆ, ಬೆಕ್ಹಾಮ್ ವ್ಹೀಲರ್ ಗ್ರೀನಾಲ್, ಒಲೀ ವೈಟ್.

ಪಂದ್ಯ ಆರಂಭ: ಮಧ್ಯಾಹ್ನ 1.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT