ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಮಹಿಳೆಯರ ವಿಶ್ವಕಪ್ ಅರ್ಹತಾ ಟೂರ್ನಿ ಮುಂದೂಡಿದ ಐಸಿಸಿ

Last Updated 12 ಮೇ 2020, 11:05 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಸೋಂಕು ಮತ್ತಷ್ಟು ವ್ಯಾಪಿಸುತ್ತಿರುವುದರಿಂದಾಗಿ ಐಸಿಸಿ ಮಹಿಳೆಯರ ವಿಶ್ವಕಪ್‌ ಕ್ವಾಲಿಫೈಯರ್‌ ಮತ್ತು ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಯುರೋಪ್‌ ವಿಭಾಗದ ಅರ್ಹತಾ ಟೂರ್ನಿಯನ್ನು ಮುಂದೂಡುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ಪ್ರಕಟಿಸಿದೆ.

ಐಸಿಸಿಯ ತನ್ನ ಸದಸ್ಯರು, ಸರ್ಕಾರ ಹಾಗೂ ಸಾರ್ವಜನಿಕ ಆರೋಗ್ಯಾಧಿಕಾರಗಳೊಂದಿಗೆ ಸಮಾಲೋಚನನೆ ನಡೆಸಿದ ನಂತರ ಈ ತೀರ್ಮಾನ ಕೈಗೊಂಡಿದೆ.ಮಹಿಳೆಯರ ವಿಶ್ವಕಪ್‌ ಕ್ವಾಲಿಫೈಯರ್‌ ಟೂರ್ನಿಯನ್ನು 2021ಕ್ಕೆ ಮತ್ತು 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಯುರೋಪ್‌ ವಿಭಾಗದ ಅರ್ಹತಾ ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದೆ.

ಮಹಿಳೆಯರಅರ್ಹತಾ ಟೂರ್ನಿಯು ಜುಲೈ 3ರಿಂದ 19 ರವರೆಗೆ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ನ್ಯೂಜಿಲೆಂಡ್‌ನಲ್ಲಿ 2021ರಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಮೂರು ತಂಡಗಳು ಅರ್ಹತೆ ಪಡೆಯಲಿವೆ.19 ವರ್ಷದೊಳಗಿನವರ ವಿಶ್ವಕಪ್‌ನ ಅರ್ಹತಾ ಟೂರ್ನಿಯು, ಡೆನ್ಮಾರ್ಕ್‌ನಲ್ಲಿ 2022ರ ಜುಲೈ 24ರಿಂದ 30 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT